ಸಕಲೇಶಪುರ:ಅಮಾಯಕ ಬಡವ್ಯಾಪಾರಿಗೆ ಲಾಟಿಯಿಂದ ಹೊಡೆದು ದರ್ಪ ಮೆರೆದ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ಅಮಾನತ್ತಾದ ಘಟನೆ ಯಸಳೂರು ವಲಯ ಪೋಲಿಸ್ ಠಾಣೆಯಲ್ಲಿ ನಡೆದಿದೆ.

ಸಕಲೇಶಪುರ ತಾಲ್ಲೂಕಿನ ಯಸಳೂರು ಹೋಬಳಿಯ ಹೆಡ್ ಕಾನ್ಸ್‌ಟೇಬಲ್ ಮಣಿ ಕುಮಾರ್ ಅಮಾನತ್ತಾಗಿದ್ದು ಗದಗ ಮೂಲದ ಅರ್ಜುನ್ ಎಂಬ ಬಡವ್ಯಾಪಾರಿಯೊಬ್ಬರು ತಲೆಯ ಮೇಲೆ ಪ್ಲಾಸ್ಟಿಕ್ ಟೇಬಲ್ ಹೊತ್ತುಕೊಂಡು ವ್ಯಾಪಾರ ಮಾಡುವ ವೇಳೆ ಅಲ್ಲಿಗೆ ಬಂದ ಯಸಳೂರು ಹೆಡ್ ಕಾನ್ಸ್‌ಟೇಬಲ್ ಮಣಿಕುಮಾರ್ ಟೇಬಲ್ ಎಷ್ಟು ಎಂದು ಕೇಳಿದ್ದಾರೆ ಒಂದು ಟೇಬಲ್ ಬೆಲೆ 2500 ರೂ ಎಂದು ಬಡ ವ್ಯಾಪಾರಿ ಹೇಳಿದ್ದಾನೆ

1800 ರೂ ಗೆ ಕೊಡು ಎಂದು ಕೇಳಿದಾಗ ಕೊಡದೆ ಇದ್ದ ಕಾರಣ ಆ ಬಡ ವ್ಯಾಪಾರಿ ಅರ್ಜುನನ್ನು ಯಸಳೂರಿನ ಕೆನರಾ ಬ್ಯಾಂಕ್ ಬಳಿ ಕರೆದೊಯ್ದು ಟೇಬಲ್ ಕದ್ದುಕೊಂಡು ಬಂದು ಇಲ್ಲಿ ವ್ಯಾಪಾರ ಮಾಡುತ್ತೀದ್ದೀಯ ಎಂದು ಲಾಟಿಯಿಂದ ಹೆಡ್ ಕಾನ್ಸ್‌ಟೇಬಲ್ ಮಣಿಕುಮಾರ್ ಬಡ ವ್ಯಾಪಾರಿ ಅರ್ಜುನ ಎಂಬುವವರಿಗೆ ಹೊಡೆದು ಹಲ್ಲೆಗೊಳಿಸಿದ್ದಾರೆ

,ಈ ಸಂಬಂಧ ಹಲ್ಲೆಗೆ ಒಳಗಾದ ಅರ್ಜುನ ಯಸಳೂರು ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನಲೆಯಲ್ಲಿ ಹಾಗೂ ಯಸಳೂರು ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಆರೋಪದ ಕೇಳಿ ಬಂದ ಹಿನ್ನಲೆಯಲ್ಲಿ ಪರಿಶೀಲನೆ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಹೆಡ್ ಕಾನ್ಸ್‌ಟೇಬಲ್ ಮಣಿ ಕುಮಾರ್ ನನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *