
ಸಕಲೇಶಪುರ : ಯಸಳೂರು ಗ್ರಾಮದ ಸುತ್ತಮುತ್ತ ಕಾಡನೆಗಳು ತೊಡಬನಹರಿ ಗ್ರಾಮದ ಸುರೇಂದ್ರ ಅವರ ಬೈಕ್ ಶೆಡ್ ಬೀಳಿಸಿ,
ಬೊಬ್ಬನಹಳ್ಳಿ ಗ್ರಾಮದ ಕರೀಗೌಡ್ರು ಮನೆಯ ಚಾವಣಿ ಎಳೆದು, ಹೊಸಳ್ಳಿ ಗ್ರಾಮದ ರಮೇಶ್ ( ರಘು) ಅವರ ಮನೆಯ ಕಾಂಪೌಂಡ್, ಗೇಟ್ ಬೀಳಿಸಿ,
ಹೊಸಳ್ಳಿ ಕೌಶಿಕ್ ಮನೆಯ ಡಿಶ್ ತುಣಿದು ಹೊಸಳ್ಳಿ ಗ್ರಾಮದ ಗದ್ದೆ ಬಯಲಿನಲ್ಲಿ ಓಡಾಡಿ, ಭತ್ತದ ಸಸಿ ಗಳ್ಳನ್ನು ತುಣಿದಿದ್ದು
ಹಾಗೂ ಹೊಸಳ್ಳಿ ಗ್ರಾಮ, ಮೆಕ್ಕಿನಮನೆ, ಹಾಡ್ಲಹಳ್ಳಿ, ಬೊಬ್ಬನಹಳ್ಳಿ ಗ್ರಾಮಗಳಲ್ಲಿ ಕಾಫಿ ಗಿಡಗಳನ್ನು ತುಣಿದು ಹಾನಿ ಮಾಡಿರುವದನ್ನು ಯಸಳೂರು RFO ಜಗದೀಶ್ ವೀಕ್ಷಣೆ ಮಾಡಿ, ಸಾರ್ವಜನಿಕರಿಗೆ ಆನೆಗಳ ಬಗ್ಗೆ ಮಾಹಿತಿ ನೀಡಿ ಮತ್ತು ಸಮಾಲೋಚನೆ ನೆಡಸಿ, ಪರಿಹಾರಕ್ಕೆ ಅರ್ಜಿ ಸಲ್ಲಿಸಲು ತಿಳಿಸಿರುತ್ತಾರೆ…

