
ಸಕಲೇಶಪುರ:- ಸಕಲೇಶಪುರ ಪಟ್ಟಣದೊಳಗಿರುವ ಎಸ್ .ಬಿ .ಐ ಬ್ಯಾಂಕ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ನಾಯಿ ಕೊಡೆಯಂತೆ ತಲೆಯೆತ್ತಿರುವ ಫುಡ್ ಕೊಟ್ (ಬೀದಿ ತಳ್ಳುವಗಾಡಿ) ಗಳಿಂದ ಪಾದ ಚಾರಿಗಳು ಹಾಗೂ ಈ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಸಮಸ್ಯೆ ಆಗುತ್ತಿದೆ.
ಅಲ್ಲದೆ ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ಕೂಡಲೇ ಈ ಅಂಗಡಿಗಳನ್ನು ತೆರವುಗೊಳಿಸಬೇಕೆಂದು ತಹಸಿಲ್ದಾರ್ ಹಾಗೂ ಎಸಿ ರವರಿಗೆ ಸಕಲೇಶಪುರ ತಾಲೂಕು ಕಾಂಗ್ರೆಸ್ ಮುಖಂಡರಾದ ಸಿ.ಅರ್. ರವಿ ಕುಮಾರ್, ಮಧು ಬೊಮ್ಮನಕೆರೆ,ಕುಮಾರ್ ಮನವಿ ಪತ್ರ ಸಲ್ಲಿಸಲಾಯಿತು.




