
ಸಕಲೇಶಪುರ : ಈ ಭಾಗದಲ್ಲಿ ಪ್ರತಿದಿನ ಕಾಡಾನೆಗಳು ಹೆಚ್ಚಾಗುತ್ತಿದ್ದು ನಾವು ತೋಟಗದ್ದೆಗೆ ಹೋಗುವುದು ಕಷ್ಟವಾಗಿದೆ. ಪ್ರತಿ ದಿನ ನಾವು ಹೆದರಿಕೆಯಿಂದ ಜೀವನ ನಡೆಸುವ ಪರಿಸ್ಥಿತಿ ಎದುರಾಗಿದ್ದು, ಅರಣ್ಯ ಅಧಿಕಾರಿಗಳು ಕೂಡಲೇ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವುದರ ಜೊತೆಗೆ ರೈತರಿಗೆ ಕಾಡಾನೆಗಳ ಚಲನ ವಲನಗಳನ್ನು ತಿಳಿಸುವುದರ ಜೊತೆಗೆ, ಕಾಡಾನೆಗಳನ್ನು ದೂರದ ಕಾಡುಗಳಿಗೆ ಓಡಿಸುವ ಕೆಲಸವನ್ನು ಶೀಘ್ರವಾಗಿ ಮಾಡಬೇಕು. ಹೊಸಳ್ಳಿ ಶ್ರೀಕಾಂತ್.
