ಬಿಜೆಪಿ ನಾಮಪತ್ರ ಸಲ್ಲಿಕೆಯ ಮೆರವಣಿಗೆಗೆ ಸಿದ್ದಗೊಳಿಸಿದ್ದ ಡಿಜೆ ಯನ್ನು ತೆರವು ಗೊಳಿಸಿದ ಪೊಲೀಸರು.ಸಕಲೇಶಪುರ : ಬಿಜೆಪಿ ನಾಮಪತ್ರ ಸಲ್ಲಿಕೆಯ ಮೆರವಣಿಗೆಗೆ ಸಿದ್ದಗೊಳಿಸಲಾಗಿದ್ದ ಡಿಜೆಯನ್ನು ಹೋಟೆಲ್ ಆಶ್ರಿತ ಸಮೀಪ ಪೊಲೀಸರು ತೆರವುಗೊಳಿಸಿದ ಸನ್ನಿವೇಶ ನಡೆಯಿತು. ಈ ಸಂದರ್ಭದಲ್ಲಿ TV46 ನೊಂದಿಗೆ ಮಾತನಾಡಿದ ಸಹಾಯಕ ಪೊಲೀಸ್ ಅಧೀಕ್ಷರಾದ ಮಿತುನ್ ಮಾತನಾಡಿ ಚುನಾವಣೆ ಪ್ರಚಾರಕ್ಕೆ ಡಿಜೆ ಬಳಸುವುದನ್ನು ನಿಷೇಧಿಸಲಾಗಿದೆ ಹಾಗೂ ಇದುವರೆಗೂ ಯಾವ ಪಕ್ಷಕ್ಕೂ ಡಿಜೆಗೆ ಅನುಮತಿ ನೀಡದ ಕಾರಣ ತೆರವುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.