ಈ ಮಹಿಳೆಯರಿಗೆ 2000 ರೂ ಹಣ ಪಡೆಯುವ ಭಾಗ್ಯ ಇರಲ್ಲ

1) ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರಿಗೂ ಗೃಹಲಕ್ಷ್ಮಿ ಯೋಜನೆ ಸಹಾಯಧನ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ.

2) ನಾಲ್ಕು ಚಕ್ರದ ವೈಟ್ ಬೋರ್ಡ್ ಕಾರು ಹೊಂದಿರುವ ಕುಟುಂಬದ ಮಹಿಳೆಯರಿಗೆ 2000 ಹಣ ಸಿಗಲ್ಲ.

3) ಸರ್ಕಾರಿ ಹುದ್ದೆ ಹೊಂದಿರುವ ಮತ್ತು ಪೆನ್ಷನ್ ಪಡೆಯುವ ಕುಟುಂಬದ ಮಹಿಳೆಯರಿಗೆ ಹಣ ಸಿಗಲ್ಲ.

4) ಆದಾಯ ತೆರಿಗೆ, ಪ್ರೊಫೆಷನಲ್ ಟ್ಯಾಕ್ಸ್ , GST ರಿಟರ್ನ್ಸ್ ಪಾವತಿಸುವ ಕುಟುಂಬದ ಮಹಿಳೆಯರಿಗೆ ಹಣ ಸಿಗಲ್ಲ

5) ಏಳು ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವ ಕುಟುಂಬದ ಮಹಿಳೆಯರಿಗೆ ಹಣ ಸಿಗಲ್ಲ.

ಮುಖ್ಯವಾದ ವಿಚಾರ ಅಂದ್ರೆ ಗೃಹಲಕ್ಷ್ಮಿಗೆ’ ಅರ್ಜಿ ಸಲ್ಲಿಸದ ಮಾತ್ರಕ್ಕೆ ಹಣ ಜಮೆ ಆಗಲ್ಲ, ತಪ್ಪದೇ ನೀವು ಈ ಕೆಲಸ ಮಾಡಬೇಕು .

ಅರ್ಜಿ ಸಲ್ಲಿಕೆ ಪೂರ್ತಿಯಾದ ಮೇಲೂ ಈ ಕೆಲಸ ಮಾಡದಿದ್ದರೆ ಅವರು ಯೋಜನೆಯಿಂದ ವಂಚಿತರಾಗಬಹುದು. ಯಾಕೆಂದರೆ ಯಜಮಾನಿಯರು ಆಧಾರ್ ಕಾರ್ಡ್ ನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡದೇ ಇರುವುದು. ತಪ್ಪದೇ ನೀವು ಆಧಾರ್ ಕಾರ್ಡ್ ನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು.

ಹಣವನ್ನು ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಲಾಗಿದ್ದು. ಆದ್ದರಿಂದ ತಪ್ಪದೇ ನೀವು ಆಧಾರ್ ಕಾರ್ಡ್ ನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು.ಅರ್ಜಿ ಸಲ್ಲಿಸಿದ್ದರು ಕೂಡ ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ಆಧಾರ್ ಸೀಡಿಂಗ್ ಗಾಗಿ ಅರ್ಜಿ ಸಲ್ಲಿಸಿ, ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ ಮಾಡಿಸಬೇಕು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *