
ಕರ್ನಾಟಕ ಆದಿ ದ್ರಾವಿಡ ತುಳು ಸಮಾಜ ಸೇವಾ ಸಂಘ (ರಿ ) ಇವರ ವತಿಯಿಂದ ಇಂದುದಿನಾಂಕ 25/8/23ನೇ ಶುಕ್ರವಾರ ಬೆಳಗೋಡು ಅಂಬೇಡ್ಕರ್ ಸಮುದಾಯದ ಭವನದಲ್ಲಿ ನಡೆದ ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ನೂತನ ಜಿಲ್ಲಾ ಅಧ್ಯಕ್ಷರಾಗಿ ಹಲಸುಲಿಗೆಯ ರವಿನಾರಾಯಣ್ ಮತ್ತು ತಾಲೂಕು ಅಧ್ಯಕ್ಷರಾಗಿ ಬೆಳಗೋಡು ರಮೇಶ್ ರವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ರಾಜ್ಯ ಸಮಿತಿಯ ಸದಸ್ಯರಾದ ಧರ್ಮ ,ಆನಂದ್ ಹೆಚ್.ಎಸ್., ಚಂದ್ರ. ಪುಟ್ಟ ರಾಜು ಮತ್ತು ಘಟಕಗಳ ಅಧ್ಯಕ್ಷರುಗಳು ಮತ್ತು ಮುಖಂಡರು ಹಾಜರಿದ್ದರು.




