
ಸಕಲೇಶಪುರ : ತಾಲ್ಲೂಕಿನ ಹೆತ್ತೂರುನಲ್ಲಿ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆತ್ತೂರು ಚಾಂಪಿಯನ್ಸ್ ಆಗಿದೆ.
ಕರ್ನಾಟಕ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ಕಿತ್ತೂರು ರಾಣಿ ವಸತಿ ಶಾಲೆಯ ನೇತೃತ್ವದಲ್ಲಿ ಜರುಗಿದ ಹೆತ್ತೂರು ಹೋಬಳಿ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಕೆಪಿಎಸ್ ಹೆತ್ತೂರು ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡಿತು.
ಬಾಲಕರ ವಿಭಾಗದ ಥ್ರೋ ಬಾಲ್, ರಿಲೇ, ಉದ್ದ ಜಿಗಿತ, ಎತ್ತರ ಜಿಗಿತ, 200ಮೀ ಮತ್ತು 800ಮೀ ಓಟದಲ್ಲಿ ಪ್ರಥಮ ಹಾಗೂ ವಾಲಿಬಾಲ್, ಖೋಖೋ, 100ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದರು.
ಬಾಲಕಿಯರ ವಿಭಾಗದಲ್ಲಿ ಗುಂಡು ಎಸೆತ ಮತ್ತು 400ಮೀ. ಓಟದಲ್ಲಿ ಪ್ರಥಮ ಹಾಗೂ ರಿಲೇ, ಉದ್ದ ಜಿಗಿತ ಮತ್ತು 100ಮೀ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಎಲ್ಲಾ ವಿಜೇತರಿಗೆ ಮತ್ತು ದೈಹಿಕ ಶಿಕ್ಷಕರಾದ ರಮೇಶ್ ಅವರಿಗೆ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಸಚಿನ್ ಹೆಚ್.ಎಂ, ಸರ್ವ ಸದಸ್ಯರು, ಪ್ರಾಂಶುಪಾಲ ಮಂಜುನಾಥ ಬಿ.ಡಿ. ಉಪ ಪ್ರಾಂಶುಪಾಲೆ ಲತಾ ಬಿ.ಕೆ. ಮತ್ತು ಶಿಕ್ಷಕ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಮುಖ್ಯ ಶಿಕ್ಷಕರಾದ ಸತೀಶ್ ಹೆತ್ತೂರು TV 46 ಮಲೆನಾಡು ಚಾನೆಲ್ ಗೆ ತಿಳಿಸಿದ್ದಾರೆ.


