ಸಕಲೇಶಪುರ : ನಗರದ ಆಜಾದ್ ರಸ್ತೆಯಲ್ಲಿರುವ ಪುರಸಭೆ ಮಳಿಗೆಯಲ್ಲಿ ಹಲವಾರು ವರ್ಷಗಳಿಂದ ಮೀನಿನ ಅಂಗಡಿಯನ್ನು ನವೀಕರಣ ಮಾಡುವುದಕ್ಕು ಬಿಡದೆ, ಬಾಡಿಗೆಯನ್ನು ಪಾವತಿಸದೇ ತನ್ನ ಕಬ್ಜದಲ್ಲಿ ಇಟ್ಟು ಕೊಂಡು ಮೀನಿನ ವ್ಯಾಪಾರ ಮಾಡಿಕೊಂಡು ಬಂದಿದ್ದರು.

ಈ ಪ್ರಕರಣ ಕೋರ್ಟ್ ಮೆಟ್ಟಿಲು ಏರಿತು ಮತ್ತು ಕೋರ್ಟ್ ನಲ್ಲಿ ಕೇಸ್ ಪುರಸಭೆಯ ಪರವಾಗಿ ಆಗಿತ್ತು. ಆದರೂ ಖಾಸಗಿ ವ್ಯಕ್ತಿ ಇದನ್ನು ಅತಿಕ್ರಮಣ ಮಾಡಿಕೊಂಡಿದ್ದರು.

ಈ ಮೀನಿನ ಮಳಿಗೆಯ ನವೀಕರಣದ ಟೆಂಡರ್ ಗೆ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಗುತ್ತಿಗೆದಾರರು ಕಾಮಗಾರಿಯನ್ನು ಪ್ರಾರಂಭಿಸಲು ಸ್ಥಳಕ್ಕೆ ಬಂದಾಗಲೆಲ್ಲ ಮೀನಿನ ಅಂಗಡಿ ನಡೆಸುತ್ತಿದ್ದ ಖಾಸಗಿ ವ್ಯಕ್ತಿ ವಿರೋಧ ವ್ಯಕ್ತ ಪಡಿಸುತಿದ್ದರು ಎಂದು ತಿಳಿದು ಬಂದಿದೆ.

ಇಂದು ಪುರಸಭೆ ಅಧಿಕಾರಿಗಳು ಆಜಾದ್ ರಸ್ತೆಯಲ್ಲಿರು ಮೀನಿನ ಮಳಿಗೆಯನ್ನು ತಮ್ಮ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳದಲ್ಲಿ ಪುರಸಭೆ ಇಂಜಿನಿಯರ್ ಕವಿತ, ಆರೋಗ್ಯ ನಿರೀಕ್ಷಕರಾದ ಧಾನವೇಂದ್ರ, ಆರೋಗ್ಯ ಇಲಾಖೆ ಖೆಯ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಸಮ್ಮುಖದಲ್ಲಿ ತೆರವು ಕಾರ್ಯಾಚರಣೆ ನೆಡೆಯಿತ್ತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *