
ಬೆಂಗಳೂರು : ಅರಣ್ಯ ಇಲಾಖೆ ಅಪಾರ ಮುಖ್ಯ ಕಾರ್ಯದರ್ಶಿ ಜಾವೆದ್ ಅಖ್ತರ್ ಇವರನ್ನು ಭೇಟಿ ಮಾಡಿದ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜುರವರು ಸಕಲೇಶಪುರ ತಾಲ್ಲೂಕು ಹಾನುಬಾಳು ಹೋಬಳಿಯ ಕ್ಯಾಮನಹಳ್ಳಿ, ಜಂಬರಡಿ, ನಡನಹಳ್ಳಿ ಕಾಡುಮನೆ, ಆಗನಿ, ಅಚ್ಚನಹಳ್ಳಿ, ಮಂಚನಹಳ್ಳಿ ಗ್ರಾಮದ ಕಂದಾಯ ಜಮೀನುಗಳ ಮೇಲೆ ಅರಣ್ಯ ಇಲಾಖೆ ಸೆಕ್ಷನ್ 4 ನೋಟಿಸ್ ನ್ನು ಹಿಂಪಡೆಯುವ ಬಗ್ಗೆ ಚರ್ಚೆ ನಡೆಸಿದರು.
ಹಾಗೂ ಬೆಂಗಳೂರಿನ ವಿಕಾಸ ಸೌಧದಲ್ಲಿ ನವೀನ್ ರಾಜ್ ಸಿಂಗ್ ಸರ್ಕಾರದ ಪ್ರಧಾನ ಕಾರ್ಯದರ್ಶಿ ವಸತಿ ಇಲಾಖೆ ಇವರನ್ನು ಭೇಟಿ ಮಾಡಿ ವಸತಿ ಯೋಜನೆಗೆ ಸಂಬಂಧಿಸಿದಂತೆ ಆಯುಕ್ತರೊಂದಿಗೆ ಚರ್ಚೆ ನೆಡೆಸಿದರು.




