
ಸಕಲೇಶಪುರ ಗ್ರಾಮ ದೇವತೆಯಾದ ಶ್ರೀ ಸಕಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು ಶ್ರೀ ನಂದೀಶ್ವರರಿಗೆ ದೀಕ್ಷೆ ಹಾಗೂ ಪಟ್ಟಾಭಿಷೇಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮವು ಶ್ರೀ ಶ್ರೀ ಶ್ರೀ ಶಿವಾಚಾರ್ಯ ಮಹಾಸ್ವಾಮಿಜಿಗಳು ಹೆಗ್ಗಡಹಳ್ಳಿ ಮಠ , ಚಂಗಡಹಳ್ಳಿ , ಯಸಳೂರು ಇವರ ಸಾನಿಧ್ಯದಲ್ಲಿ ನಡೆಯಿತು.
ಬೆಳಗ್ಗೆ 9:00 ರಿಂದ ಮಧ್ಯಾಹ್ನ 12:00 ವರೆಗೆ ರುದ್ರಾಭಿಷೇಕ ಕಾರ್ಯಕ್ರಮ ಹಾಗೂ ಮಧ್ಯಾಹ್ನ 12:30 ರಿಂದ 130 ರವರೆಗೆ ಶ್ರೀ ನಂದೀಶ್ವರರಿಗೆ ದೀಕ್ಷೆ ಹಾಗೂ ಪಟ್ಟಾಭಿಷೇಕ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ನಂದಿ ಕೃಪರಾಜು, ಮಾಜಿ ಪುರಸಭಾ ಸದಸ್ಯ ವೆಂಕಟೇಶ್, ವಿಟಲ್, ಪ್ರಕಾಶ್ ಚಂದ್ , ಉಮಾಪತಿ, ದುಷ್ಯಂತ, ಯೋಗೇಶ್ ಹಾಗೂ ಸಕಲೇಶ್ವರಸ್ವಾಮಿ ದೇವಸ್ಥಾನ ಕಮಿಟಿಯ ಇತರೆ ಸದಸ್ಯರುಗಳು ಇದ್ದರು.
ಇಂದು ರಾತ್ರಿ 8-30 ಕ್ಕೆ ಪುಷ್ಪಾರ್ಚನೆ ಕಾರ್ಯಕ್ರಮ ನೆಡೆಯುವುದು ಎಂದು ದೇವಸ್ಥಾನದ ಮೂಲಗಳಿಂದ ತಿಳಿದುಬಂದಿದೆ.




