ಸಕಲೇಶಪುರ : ಇಂದು ಸಂಜೆ ವೇಳೆ ರಕ್ಷಿದಿ ಭಾಗದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಆಟೋ ರಿಕ್ಷಾವನ್ನು ಪರಿಶೀಲಿಸಿದಾಗ ಪ್ಯಾಸೆಂಜರ್ ಆಟೋದಲ್ಲಿ ಪ್ಯಾಕೆಟ್ ಮಾಡಿಟ್ಟಿದ್ದ ಬರೋಬ್ಬರಿ 75 ಕೆ.ಜಿ ಅಷ್ಟು ಗೋಮಾಂಸ ಪತ್ತೆಯಾಗಿದೆ.

ಬಜರಂಗದಳ ಕಾರ್ಯಕರ್ತರ ಮಾಹಿತಿ ಆಧರಿಸಿ ಗ್ರಾಮಾಂತರ ಠಾಣೆಯ ಪೊಲೀಸರು ಆಟೋದಲ್ಲಿ ಪ್ಯಾಕೆಟ್ ಮಾಡಿಟ್ಟಿದ್ದ ಗೋಮಾಂಸ, ಆಟೋ ರಿಕ್ಷಾ ಹಾಗೂ ಆಟೋ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅರೇಹಳ್ಳಿ ಭಾಗದಿಂದ ಗೋಮಾಂಸ ತಂದು ಮನೆ ಬಾಗಿಲಿಗೆ ಕೊಡುತ್ತಿರುವ ದೊಡ್ಡ ಜಾಲವೇ ಕಾರ್ಯನಿರ್ವಹಿಸುತ್ತಿರುವ ಶಂಕೆಯಿದೆ ಬಜರಂಗದಳ ಸಕಲೇಶಪುರ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *