ಕೃಷ್ಣ ರಾಧೆಯ ಸಂಬಂಧ ಅತ್ಯುನ್ನತ ಪ್ರೇಮಕ್ಕೆ ಉದಾಹರಣೆ ಅಲ್ಲಿ ಭಕ್ತಿಯಿದೆ, ಪ್ರೀತಿಯಿದೆ. ತ್ಯಾಗವಿದೆ, ಬದ್ಧತೆಯಿದೆ, ಹರೆ ಕೃಷ್ಣ… ರಾಧೆ ರಾಧೆ

ಸಕಲೇಶಪುರ.ಪಟ್ಟಣದ ಪುರಭವನದಲ್ಲಿ ಇಂದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ವಿಶ್ವಹಿಂದೂ ಪರಿಷತ್ ಸ್ಥಾಪನ ದಿವಸದ ಅಂಗವಾಗಿ 9 ವರ್ಷದ ಒಳಗಿನ ಮಕ್ಕಳಿಗೆ ರಾಧೆ ಮತ್ತು ಕೃಷ್ಣ ವೇಷಧಾರಿಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ವಿಶ್ವ ಹಿಂದೂ ಪರಿಷತ್ ಸಂಘಟನೆ ಧಾರ್ಮಿಕವಾಗಿ ಹಿಂದೂ ಸಮಾಜವನ್ನು ಜಾಗೃತಿಗೊಳಿಸುವ ಕಾರ್ಯ ಕಳೆದ 59 ವರ್ಷಗಳಿಂದ ನಿರಂತರವಾಗಿ ಮಾಡುತ್ತಿದ್ದು, 1964ನೇ ಇಸವಿಯಲ್ಲಿ ರಾಮಜನ್ಮಭೂಮಿ ಹೋರಾಟದ ನಿಮಿತ್ತ ಪ್ರಾರಂಭವಾಗಿ ಇಂದು ಭವ್ಯ ರಾಮಮಂದಿರ ನಿರ್ಮಾಣದಲ್ಲಿ ವಿಶ್ವ ಹಿಂದು ಪರಿಷತ್ ಪಾತ್ರ ಅತಿ ದೊಡ್ಡದು, ಹಾಗಾಗಿ ವಿ ಹಿಂ ಪ ಸ್ಥಾಪನ ನಿಮಿತ್ತ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ರಾಧೆ ಕೃಷ್ಣ ವೇಷಧಾರಿಗಳ ಸ್ಪರ್ಧೆ ಕಾರ್ಯಕ್ರಮ ನಡೆಸುತ್ತಾ ಬಂದಿದೇವೆ. ಇಂದು ನಡೆದ ಈ ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಮಕ್ಕಳು ಹಾಗೂ ಪೋಷಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು.
ಈ ಕಾರ್ಯಕ್ರಮದಲ್ಲಿ 11ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪಟ್ಟಣದ ಪ್ರೇಮನಗರ ಬಡಾವಣೆಯ ದಿವಾಕರ್ ಹಾಗು ಸುಮರವರ ಮಗ ದರ್ಶನ್ ಗೆ ವಿಶ್ವ ಹಿಂದೂ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದಎಲ್ಲಾ ಮಕ್ಕಳಿಗೂ ಬಹುಮಾನ ವಿತರಣೆ ಮಾಡಲಾಯಿತು. ನಂತರ ಮಕ್ಕಳಿಗಾಗಿ ಮಡಿಕೆ ಒಡೆಯುವ ಸ್ಪರ್ಧೆಯನ್ನು ಸಹ ನಡೆಸಲಾಯಿತು, ಈ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಮಕ್ಕಳು ಮತ್ತು ಪೋಷಕರು ಅತಿ ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ಯಾಮ ರಾವ್ ಕಾಫಿ ಬೆಳೆಗಾರರು ಹೆಗ್ಗೋವೆ, ಮುಖ್ಯ ಅತಿಥಿಯಾಗಿ ಶೀಲಾ ಸುಧಾಕರ್, ಪುನೀತ್ ಬನ್ನಹಳ್ಳಿ , ಮನು ಅರೆಕೆರೆ ವಹಿಸಿದ್ದರು.
ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ ರಾಜ್ಯ ಮುಖಂಡ ರಘು ಸಕಲೇಶಪುರ, ವಿ ಹೆಚ್ ಪಿ ಕಾರ್ಯದರ್ಶಿ ಮಂಜುನಾಥ, ತಾಲ್ಲೂಕು ಸಂಯೋಜಕ ಶ್ರಿಜೀತಗೌಡ,ಸಹಸಂಯೋಜಕ್ ಶಿವು ಜಿಪ್ಪಿ , ಬಜರಂಗದಳದ ಹಾಸನ ಜಿಲ್ಲಾ ಸಂಯೋಜಕ ಕೌಶಿಕ್ , ರವಿ, ಮನು, ದುಷ್ಯಂತಗೌಡ, ಪ್ರದೀಪ್, ಶ್ರೀಕಾಂತ, ಸುಭಾಷ್, ಲೋಕೇಶ್ ಆಟೋ, ಇತರರು ಇದ್ದರು.










