
ಹಾಸನ : ಕೆ. ಆರ್ .ಎಸ್ . ಪಕ್ಷದ ವತಿಯಿಂದ ನಡೆಸುತ್ತಿರುವ ಸೌಜನ್ಯ ಅಪಹರಣ ಹತ್ಯಾಚಾರ ಕೊಲೆ ಪ್ರಕರಣದ ವಿಷಯಕ್ಕೆ ಸಂಬಂದಿಸಿದಂತೆ ತನಿಖೆ ಮಾಡಲು ಹಮ್ಮಿಕೊಂಡಿರುವ ಪಾದಯಾತ್ರೆಗೆ ಇಂದು ನಮ್ಮ ಹಾಸನ ಜಿಲ್ಲಾ ಒಕ್ಕಲಿಗರ ವೇದಿಕೆ ವತಿಯಿಂದ ಪಾದಯಾತ್ರೆಯಲ್ಲಿ ಪಾಲ್ಗೊಂಡು, ಪಾದಯಾತ್ರೆಗೆ ಬೆಂಬಲ ಸೂಚಿಸಲಾಯಿತು,
ಈ ಸಂದರ್ಭದಲ್ಲಿ,ಒಕ್ಕಲಿಗರ ವೇದಿಕೆಯ, ಸಂಸ್ಥಾಪಕ ಅಧ್ಯಕ್ಷರ ,ರಾಜೇಶ್ ಗೌಡ ಹಾಗೂ ಜಿಲ್ಲಾ ಕಾನೂನು ಸಲಹೆಗಾರರಾದ ಕೆ. ಎಸ್ .ಯೋಗೇಶ್ ಹಾಗೂ ಸದಸ್ಯರು ಹಾಗೂ ವಕೀಲರಾದ,ಕೆ. ಎಸ್. ರವಿ ರವರು ಭಾಗಿಯಾಗಿದ್ದರು.



