ಸೆಪ್ಟಂಬರ್ 3 ರ ಭಾನುವಾರದಂದು ಬೇಲೂರು ತಾಲ್ಲೂಕಿನ ಹಳೆಬೀಡಿನ ಪುಷ್ಪಗಿರಿ ಮಠದ ಭವ್ಯ ಸಭಾಂಗಣದಲ್ಲಿ ಜರುಗಿದ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ, ಕಸಾಪ ಸರ್ವ ಸದಸ್ಯರ ಸಾಮಾನ್ಯ ಸಭೆಯ ಸಮಾವೇಶದಲ್ಲಿ ಲೇಖಕರು, ಪತ್ರಕರ್ತರು, ಸಕಲೇಶಪುರ ತಾಲ್ಲೂಕಿನ ಬರಹಗಾರರ ಸಂಘದ ಅಧ್ಯಕ್ಷರಾದಂತಹ ವಿಶ್ವಾಸ್. ಡಿ .ಗೌಡ ರವರ *ಕತ್ತರಿಘಟ್ಟ ಮತ್ತು ಹರಿಸೇವಾ* ಎಂಬ ಕೃತಿಯನ್ನು ಪುಷ್ಪಗಿರಿ ಮಹಾಸಂಸ್ಥಾನ ಮಠದ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ರಾಜ್ಯ ಕಸಾಪ ಅಧ್ಯಕ್ಷರಾದ ನಾಡೋಜ ಡಾ.

ಮಹೇಶ್ ಜೋಶಿ ಅವರು ಬಿಡುಗಡೆ ಮಾಡಿದರು. ವೇದಿಕೆಯಲ್ಲಿ ಲೇಖಕ ವಿಶ್ವಾಸ್. ಡಿ .ಗೌಡ, ಜಿಲ್ಲಾ ನಿವೃತ್ತ ನ್ಯಾಯಾಧೀಶರಾದ ಶಿವಲಿಂಗೇಗೌಡರು, ರಾಜ್ಯ ಕಸಾಪ ಪದಾಧಿಕಾರಿಗಳು, ಹಾಸನ ಜಿಲ್ಲೆಯ ಕಸಾಪ ಅಧ್ಯಕ್ಷರಾದ ಡಾ.ಮಲ್ಲೇಶ್ ಗೌಡರು, ಮಂಡ್ಯ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಡಾ.ಹೆಚ್. ಎಸ್ ಮುದ್ದೇಗೌಡರು ಹಾಗೂ ಕರ್ನಾಟಕದ ಎಲ್ಲಾ ಜಿಲ್ಲೆಗಳ ಕಸಾಪ ಅಧ್ಯಕ್ಷರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *