
ಸಕಲೇಶಪುರ :- ಪಟ್ಟಣದ ಹೆಚ್. ಡಿ. ಪಿ. ಎ ಸಭಾಂಗಣದಲ್ಲಿ ಇಂದು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷರಾದ ಕೆ.ಎನ್ ಕ್ಯಾನಹಳ್ಳಿ ಸುಬ್ರಮಣ್ಯರ ಅಧ್ಯಕ್ಷತೆಯಲ್ಲಿ ಮುಂದಿನ ತಿಂಗಳು ಅಕ್ಟೋಬರ್ 1 ರಂದು ನೆಡೆಯುವ ಅಂತಾರಾಷ್ಟ್ರೀಯ ಕಾಫಿ ಡೇ ಬಗ್ಗೆ ಪೂರ್ವಭಾವಿ ಸಭೆ ನೆಡೆಸಲಾಯಿತು.
ಸಭೆಯಲ್ಲಿ ಕಾರ್ಯಕ್ರಮದಲ್ಲಿ ರೂಪರೇಷೆಗಳ ಬಗ್ಗೆ ಚರ್ಚೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಬೆಳೆಗಾರರ ಜೊತಗೆ ಚರ್ಚಿಸಿದ ಅಧ್ಯಕ್ಷರು ಕಾರ್ಯಕ್ರಮ ವ್ಯವಸ್ಥಿತವಾಗಿ ಹಾಗೂ ಅದ್ದೂರಿಯಾಗಿ ನೆಡೆಸಲು ಯಾವ ರೀತಿ ಕಾರ್ಯಕ್ರಮ ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಲಾಯಿತು.
ಕಾರ್ಯಕ್ರಮ ಯಶಸ್ವಿಯಾಗಲು ಪ್ರಚಾರ ಕಲೆ ಹಾಗೂ ಅತಿಥಿಗಳ ಪಾತ್ರ ಮುಖ್ಯ ಪಾತ್ರ ವಹಿಸುತ್ತಾರೆ.ಈ ನಿಟ್ಟಿನಲ್ಲಿ ಈ ಕಾರ್ಯಕ್ರಮಕ್ಕೆ ಹೆಚ್ಚು ರಂಗು ತರಲು ಸ್ಥಳೀಯ ಪ್ರತಿಭೆ ಕನ್ನಡದ ರ್‍ಯಾಪ್ ಸಿಂಗರ್ ಚಂದನ್ ಶೆಟ್ಟಿ ಕರೆಸುವ ಜೊತೆಗೆ ಒಂದು ರ್‍ಯಾಪ್ ಹಾಡನ್ನು ಮಾಡಿಸುವ ಆಲೋಚನೆ ಇದ್ದು, ಇದಕ್ಕೆ ಈಗಾಗಲೇ ಇವರನ್ನು ಸಂಪರ್ಕಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ಒಟ್ಟಾರೆ ಕಾಫಿಯನ್ನು ಅತಿ ಹೆಚ್ಚು ಜನಪ್ರಿಯ ಪಾನೀಯವಾಗಿ ಪ್ರಚಾರ ಮಾಡುವ ನಿಟ್ಟಿನಲ್ಲಿ ಜೊತೆಗೆ ಕಾಫಿ ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಕಲ್ಪಿಸಿಕೊಡುವ ಕೆಲಸ ಆಗಬೇಕು.ಕಾರಣ ಈ ಭಾಗದಲ್ಲಿ ಹೆಚ್ಚು ಜನರು ಕಾಫಿಯನ್ನೇ ಆದಾಯ ಮೂಲವಾಗಿಸಿಕೊಡಿದ್ದಾರೆ.ಹಾಗಾಗಿ ಈ ವರ್ಷದ ಇಂಟರ್ನ್ಯಾಷನಲ್ ಕಾಫಿ ಡೇ ಯಶಸ್ವಿ ಮಾಡಲು ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್. ಡಿ. ಪಿ. ಎ ಮಾಜಿ ಅಧ್ಯಕ್ಷರು ಸಿ. ಎಸ್ ಮಹೇಶ್, ಕಸಬಾ ಬೆಳೆಗಾರರ ಸಂಘದ ಅಧ್ಯಕ್ಷರಾದ ಆರ್. ಎಂ ಚಂದ್ರಶೇಖರ್,ಆಲೂರು ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷರಾದ ರವಿಕುಮಾರ್,ಅರೇಹಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಬಿ.ಪಿ ಬಸವರಾಜ್,ಯಸಳೂರು ಬೆಳೆಗಾರರ ಸಂಘದ ಅಧ್ಯಕ್ಷರಾದ ಡಾ.ರಾಮಚಂದ್ರ,ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

