ಪ್ರವೀಣ್ ನೆಟ್ಟಾರ್ ಇಲ್ಲ ಎಂಬ ನೋವನ್ನು ಇವತ್ತು ಹಿಂದೂ ಸಮಾಜ ಅವರ ಮನೆಯವರಿಗೆ ಮರೆಸಬೇಕು. ಅವರ ಮನೆಯ ಪ್ರತಿಯೊಂದು ಕಾರ್ಯದಲ್ಲಿ ನಾವು ಹಿಂದೂಗಳು ಪಾಲ್ಗೊಳ್ಳಬೇಕು. ಪ್ರವೀಣ್ ನೆಟ್ಟಾರ್’ನ ಮನೆ ಗೃಹಪ್ರವೇಶದಲ್ಲಿ ವಿಹಿಂಪ ರಾಜ್ಯ ಮುಖಂಡ ರಘು ಸಕಲೇಶಪುರ ಬಾಗಿ.ಕಳೆದ ಜುಲೈ ತಿಂಗಳಲ್ಲಿ ನೆಟ್ಟಾರು ಭಾಗದ ವ್ಯಕ್ತಿ ಪಕ್ಷ ಸಂಘಟಕ ಮಂಗಳೂರು ವಿಭಾಗದ ಬಿಜೆಪಿ ಯುವಮೋರ್ಚಾದ ಪದಾಧಿಕಾರಿ ಪ್ರವೀಣ್’ನನ್ನು ಎಸ್ಡಿಪಿಐ ಹಾಗೂ ನಿಷೇಧಿತ ಪಿಎಫ್ಐ ಇಸ್ಲಾಂ ಭಯೋತ್ಪಾದಕರು ಪ್ರವೀಣ್ ನೆಟ್ಟಾರ್ ಅವರು ಜೀವನೋಪಾಯಕ್ಕಾಗಿ ತನ್ನ ಕೋಳಿ ಅಂಗಡಿಯಲ್ಲಿ ಕಾರ್ಯನಿರ್ವಹಣಿಸುತ್ತಿದ್ದಾಗ ದಾರುಣವಾಗಿ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದರು.ಜುಲೈ 26 ರಂದು ಪ್ರವೀಣ್ ನೆಟ್ಟಾರ್’ನ ಹತ್ಯೆ ನಡೆದಿತ್ತು. ಸಾವಿನ ದುಃಖದಲ್ಲಿ ಕೂಡ ಅವರ ಮನೆಗೆ ಹೋಗಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದ ರಘು ಸಕಲೇಶಪುರ ಹತ್ಯೆಯಾಗಿ ನೆನ್ನೆ ನಡೆದ ಅವರ ಮನೆ ಗೃಹಪ್ರವೇಶದ ನಡುವೆ ಮೂರರಿಂದ ನಾಲ್ಕು ಬಾರಿ ಅವರ ಮನೆಗೆ ತೆರಳಿ ಮನೆಯವರ ಆರೋಗ್ಯ ವಿಚಾರಿಸಿ ಸಂಘಟನೆ ನಿಮ್ಮೊಂದಿಗೆ ಇದೆ ಎಂದು ಧೈರ್ಯ ತುಂಬಿದ್ದರು.ಅಂತೆಯೇ ಇದೆ ಎಪ್ರಿಲ್ 27 ರಂದು ನಡೆದ ಪ್ರವೀಣ್ ಮನೆಯ ಗೃಹಪ್ರವೇಶದಲ್ಲಿ ಭಾಗಿಯಾಗಿದ್ದ ವಿಹಿಂಪ ರಾಜ್ಯ ಮುಖಂಡ ರಘು ಸಕಲೇಶಪುರ ತೆರಳಿ ನಾನು ಕೂಡ ಪ್ರವೀಣ್ ಮನೆಯ ಸದಸ್ಯ ಎನ್ನುವಂತೆ ಓಡಾಟ ನಡೆಸಿದರು.ಈ ನಡುವೆ ಪ್ರವೀಣ್ ನೆಟ್ಟಾರ್’ನ ಮನೆಯಲ್ಲಿ ಪತ್ರಕರ್ತರು ರಘು ಸಕಲೇಶಪುರ’ನ್ನು ಪ್ರಶ್ನಿಸಿದಾಗ ಪ್ರವೀಣ್ ಕೇವಲ ಬಿಜೆಪಿ ಕಾರ್ಯಕರ್ತನಲ್ಲ ಆತನೊಬ್ಬ ಹಿಂದೂ ಕಾರ್ಯಕರ್ತ ಎಂದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *