
ಬೇಲೂರು : ತಾಲ್ಲೂಕಿನ ಅರೇಹಳ್ಳಿ ಹೋಬಳಿ ನಾರ್ವೆ ಗ್ರಾಮದಲ್ಲಿ ವಿಶೇಷವಾಗಿ ತೆಂಗಿನಕಾಯಿಯಲ್ಲಿ ಮೂಡಿರುವ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರಾದ ಶ್ರೀಧರ್ ಭಟ್, ಜಾತಿ ಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ಗ್ರಾಮಕ್ಕೆ ಒಂದೇ ಗಣಪತಿ ಎಂಬಂತೆ ಪ್ರತೀ ವರ್ಷವೂ ಸಹ ಒಂದಲ್ಲಾ ಒಂದು ರೀತಿಯ ಗಣಪತಿ ಕೂರಿಸಿ ಪೂಜೆ ಸಲ್ಲಿಸಲಾಗುತ್ತಿದೆ ಎಂದರು.


