
ಸಕಲೇಶಪುರ : ಪಿ.ಡಬ್ಲ್ಯೂ.ಡಿ ವಿಭಾಗದ ನೂತನ AEE ಮುರುಗೇಶ್ ನಾಗರಾಜ್ ಅವರನ್ನು ಭೇಟಿ ಮಾಡಿದ ಬಿಜೆಪಿ ಮುಖಂಡ ಪೃಥ್ವಿ ಅವರೇಕಾಡು.
ಸಕಲೇಶಪುರದಿಂದ ಮೂಡಿಗೆರೆ ಹೋಗುವ ರಾಜ್ಯ ಹೆದ್ದಾರಿಯ ಆನೆಮಹಲ್ ನಲ್ಲಿ ನೀರಿನ ಪೈಪ್ ಅಳವಡಿಸಲು ರಸ್ತೆ ಅಗೆದು ಹಾಕಿದ್ದು, ಇದೀಗ ಅದು ತುಂಬ ಗುಂಡಿ ಆಗಿದ್ದು, ರಸ್ತೆಯಲ್ಲಿ ಅಡ್ಡಡ್ಡ ಚರಂಡಿ ನಿರ್ಮಾಣ ಆಗಿದೆ.
ಇದರಿಂದ ದಿನ ನಿತ್ಯ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಆಟೋ, ನಾಲ್ಕು ಚಕ್ರ ಮತ್ತು ಇನ್ನುಳಿದ ಬಾರಿ ವಾಹನಗಳು ನಿಯಂತ್ರಣ ಕಳೆದುಕೊಳ್ಳುವ ಪರಿಸ್ಥಿತಿ ಇದ್ದು ಈ ಜಾಗದಲ್ಲಿ ಸರಿಯಾದ ವ್ಯವಸ್ಥೆ ಮಾಡುವ ಮೂಲಕ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಪೃಥ್ವಿ ಅವರೇಕಾಡು ಕೇಳಿಕೊಂಡ ಮನವಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ನೂತನ AEE ಮುರುಗೇಶ್ ನಾಗರಾಜ್ ಅವರು ಆದಷ್ಟು ಬೇಗ ರಸ್ತೆ ದುರಸ್ತಿ ಮಾಡಿಕೊಡುವ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.



