ಸಕಲೇಶಪುರ : ವಿವಿದ ಬೇಡಿಕೆಗಳಿಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಸಂಯೋಜಕ ಸಮಿತಿ ವತಿಯಿಂದ ಬುದವಾರ ತಾಲೂಕು ಮಿನಿ ವಿಧಾನಸೌದದ ಮುಂಭಾಗ ಪ್ರತಿಭಟನೆ ನಡೆಸಿದರು.

ಭೂಮಿ, ವಸತಿ, ನಾಗರೀಕ ಸೌಲಭ್ಯಗಳಿಗಾಗಿ ಮತ್ತು ದಲಿತರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ಘೋಷಣೆಯನ್ನು ಗೂಗಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಯೋಜಕ ರಾಜಶೇಖರ್ ಮಾತನಾಡಿ ಹಲವಾರು ವರ್ಷಗಳಿಂದ ನಮ್ಮ ಸಂಘಟನೆಯ ವತಿಯಿಂದ ಭೂಮಿ, ವಸತಿ, ನಾಗರೀಕ ಸೌಲಭ್ಯಗಳಿಗಾಗಿ ಮತ್ತು ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಯುವಂತೆ ಸರ್ಕಾರಗಳಿಗೆ ಮನವಿ ಮಾಡಿ ಪ್ರತಿಭಟನಾ ಧರಣಿಯನ್ನು ಮಾಡಿದರೂ ಕೂಡ ಬಡವರು, ಕೃಷಿ ಕೂಲಿಕಾರರು, ಕಾರ್ಮಿಕರು, ಭೂಹೀನ ದಲಿತರು ವಸತಿ ಮತ್ತು ನಾಗರೀಕ ಸೌಲಭ್ಯಗಳಿಂದ ಇಂದಿಗೂ ವಂಚಿತರಾಗಿದ್ದು ಯಾವುದೇ ಸರ್ಕಾರಗಳು ಬಂದರೂ ಸಹಿತ ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ಜಾರಿಮಾಡದೆ ಇಂದಿಗೂ ನಮ್ಮ ಸಮಾಜ ಅಸ್ಪೃಶ್ಯತೆಯನ್ನು ಅನುಭವಿಸುತ್ತಿದ್ದಾರೆ ಎಂದ ಅವರು

ಹಾನುಬಾಳು ಹೋಬಳಿ ದೊನಹಳ್ಳಿ ಗ್ರಾಮದಲ್ಲಿ 18 ಪರಿಶಿಷ್ಟ ಜಾತಿಯ ಕುಟುಂಬಗಳು ನೂರಾರು ವರ್ಷಗಳಿಂದ ಎಸ್ಟೇಟ್ ನ ಲೈನ್ ಮನೆಗಳಲ್ಲಿ ವಾಸವಿದ್ದು, ಈಗ ಬಿಡಬೇಕಾಗಿರುವ ಸಂದರ್ಭ ಬಂದಿದ್ದು ಸ್ವಂತ ನಿವೇಶನವಿಲ್ಲದೆ ಮನೆ ಇಲ್ಲದೆ ಚಿಂತಾಜನಕ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.ಎರಡು ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ, ಪಂಚಾಯಿತಿಯಲ್ಲಿ ನಿವೇಶನ ಮತ್ತು ಮನೆ ಕೇಳುತ್ತಿದ್ದಾರೆ ,ಅವರುಗಳಿಗೆ ನಿವೇಶನ ಮತ್ತು ಮನೆ ಕಟ್ಟಿಸಿ ಕೊಡಬೇಕು ಹಾಗೂಹೆತ್ತೂರು ಗ್ರಾಮದಲ್ಲಿ 100 ಕುಟುಂಬ ಪರಿಶಿಷ್ಟ ಜಾತಿಯವರಿದ್ದು , ಅದರಲ್ಲಿ 40 ಕುಟುಂಬಗಳಲ್ಲಿ 3 ಕೋಣೆಯುಳ್ಳ ಮನೆಯೊಂದರಲ್ಲಿ 2-3 ಸಂಸಾರ ವಾಸವಾಗಿದ್ದು , ಇವರಿಗೆ ನಿವೇಶನ ಮತ್ತು ವಸತಿ ಸೌಲಭ್ಯ ಒದಗಿಸಿಕೊಡಬೇಕು ಎಂದರುದಲಿತ ಸಂಘರ್ಷ ಸಮಿತಿ ರಾಜ್ಯ ಸಂಯೋಜಕ ಹೆತ್ತೂರು ಅಣ್ಣಯ್ಯ ಮಾತನಾಡಿ ಸರ್ಕಾರ ಕೂಡಲೇ ರಾಜ್ಯದ ಎಲ್ಲಾ ಹಳ್ಳಿಯ ಭೂಹೀನ ದಲಿತರನ್ನು ಗುರುತಿಸಿ ವ್ಯವಸಾಯ ಭೂಮಿ ಮಂಜೂರು ಮಾಡಿಕೊಡಬೇಕು.

ಎಲ್ಲಾ ಹಳ್ಳಿಗಳಲ್ಲಿ ಸ್ಮಶಾನ ಭೂಮಿ ಕಾಯ್ದಿರಿಸಬೇಕು.ಹಲವಾರು ವರ್ಷಗಳಿಂದ ಬಡವರುಬಗರ್ ಹುಕುಂ ಸಾಗುವಳಿ ಭೂಮಿ ಮಾಡಿಕೊಂಡು ಬರುತ್ತಿದ್ದು ಅದನ್ನು ತಕ್ಷಣ ಸಕ್ರಮಕರಣ ಸಮಿತಿ ರಚಿಸಿ ತ್ವರಿತ ಗತಿಯಲ್ಲಿ ಸಾಗುವಳಿದಾರರಿಗೆ ಭೂಮಿ ಕೊಡಬೇಕು. ಚಂಗಡಹಳ್ಳಿ ಗ್ರಾಮ ಪಂಚಾಯಿತಿ ಸ.ನಂ.26 ರಲ್ಲಿ 8 ಎಕರೆ ಭೂಮಿ ಇದ್ದು, 2 ಎಕರೆ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಭವನಕ್ಕೆ , ಉಳಿದ 6 ಎಕರೆ ಅಲ್ಲಿಯ ನಿವೇಶನ ರಹಿತರಿಗೆ ಕಾಯ್ದಿರಿಸಿಬೇಕು . ಸಕಲೇಶಪುರ ಪಟ್ಟಣ ವ್ಯಾಪ್ತಿಯಲ್ಲಿ ನಿವೇಶನ ರಹಿತ ದಲಿತರನ್ನು ಗುರುತಿಸಿ ನಿವೇಶನ ಮತ್ತು ವಸತಿ ಸೌಲಭ್ಯ ಒದಗಿಸಿಕೊಡಬೇಕು.ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿ ಬಡವರಿಗೆ ಮತ್ತು ಪೌರ ಕಾರ್ಮಿಕರ ಬಡಾವಣೆಯಲ್ಲಿ ಪೌರ ಕಾರ್ಮಿಕರಿಗೆ ಸ್ಲಂ ಬೋರ್ಡ್ ನಿಂದ ಮನೆ ನಿರ್ಮಿಸುತ್ತಿದ್ದು, ಇಲ್ಲಿಗೆ ಐದು ವರ್ಷಗಳು ಕಳೆದರೂ ಪೂರ್ಣಗೊಂಡಿಲ್ಲ , ಕೂಡಲೆ ತ್ವರಿತಗತಿಯಲ್ಲಿ ಕೆಲಸ ಪೂರ್ಣಗೊಳಿಸಿ ಅವರುಗಳಿಗೆ ವಾಸಕ್ಕೆ ಅನುವು ಮಾಡಿಕೊಡಬೇಕು.ಇಲ್ಲಿನಪುರಸಭೆಯವರು ಪಟ್ಟಣದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಮಳಲಿ ಗ್ರಾಮದಲ್ಲಿ ಹಾಕುವುದಕ್ಕೆ ಈಗಾಲೇ ಕಾಮಗಾರಿ ಆರಂಬಿಸಿದ್ದು ಇದು ಅಲ್ಲಿ ವಾಸಿಸುವ ಬಡಜನರ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಕೂಡಲೇ ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸ್ಥಳ ತನಿಖೆ ಮಾಡುವ ಮೂಲಕ ಸಮಸ್ಯೆಗೆ ಪರಿಹಾರ ಮಾಡಬೇಕು ಇಲ್ಲಿನ ಘನ ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣ ಕಟಕ ಬೇರೆಡೆಗೆ ಸ್ಥಳಾಂತರಿಸಬೇಕೆಂದು ದಸಂಸ ಒತ್ತಾಯಿಸುತ್ತದೆ ಎಂದರು.

ಪ್ರತಿಭಟನೆಯಲ್ಲಿ ತಾಲೂಕು ಸಂಯೋಜಕ ಧರ್ಮು ಕಲ್ಗಣೆ, ಜಿಲ್ಲಾ ಸಂಚಾಲಕ ನಾಗರಾಜು, ನಟರಾಜು, ರವಿ, ನಗರ ಸಂಯೋಜಕ ಹನೀಫ್, ಮೊಹೀದೀನ್ ಷರೀಫ್, ಪ್ರಮೋದ್, ಇತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *