ಸಕಲೇಶಪುರ: ರಸ್ತೆಗಳು ನಿರ್ಮಾಣವಾಗುವಾಗ ಸಾರ್ವಜನಿಕರು ಸಹಕರಿಸಿದರೆ ಮಾತ್ರ ಉತ್ತಮ ರಸ್ತೆ ನಿರ್ಮಾಣವಾಗಲು ಸಾಧ್ಯ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ತಾಲೂಕಿನ ಮಠಸಾಗರ ಗ್ರಾಮದಲ್ಲಿ ನೂತನ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಮಾತನಾಡಿ ಕೊಲ್ಲಹಳ್ಳಿ ಗ್ರಾಮದಿಂದ ಮಠಸಾಗರ ಮಾರ್ಗವಾಗಿ ಹಳೇ ಬಾಗೆ ಎಸ್ಟೇಟ್‌ವರೆಗಿನ ಸುಮಾರು 2.75 ಕಿ.ಮಿ ದೂರವನ್ನು 2ಕೋಟಿ 66ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಈ ಹಿಂದೆ ಇದು ಬಿ.ಎಂ ರಸ್ತೆಯಾಗಿದ್ದು ಈ ರಸ್ತೆಯ ನಿರ್ಮಾಣದಿಂದ ಈ ಭಾಗದಲ್ಲಿರುವ ಜನಸಾಮಾನ್ಯರಿಗೆ ಬಹಳ ಅನುಕೂಲವಾಗುತ್ತದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು.

ತಾಲೂಕಿನಲ್ಲಿ ಹಲವು ರಸ್ತೆಗಳು ಹದಗೆಟ್ಟಿವೆ. ರಸ್ತೆ ನಿರ್ಮಾಣಕ್ಕೆ ಅಧಿಕ ಬೇಡಿಕೆಯಿದೆ.ಹಂತ ಹಂತವಾಗಿ ರಸ್ತೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇನೆ. ರಾಜ್ಯ ಸರ್ಕಾರ ಯಾವ ರೀತಿ ರಸ್ತೆಗಳಿಗೆ ಹಣ ಬಿಡುಗಡೆ ಮಾಡುತ್ತದೆಂಬುದನ್ನು ಕಾದು ನೋಡಬೇಕಾಗಿದೆ ಎಂದರು.

ಈ ಸಂಧರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಮುರುಗೇಶ್, ಅಭಿಯಂತರೆ ಸಲ್ಮಾ, ಮಳಲಿ ಗ್ರಾ.ಪಂ ಸದಸ್ಯೆ ಅಣ್ಣಮ್ಮ, ಬಿಜೆಪಿ ಮುಖಂಡರುಗಳಾದ ಕೊಲ್ಲಹಳ್ಳಿ ಬಾಲರಾಜ್, BC ಸತೀಶ್ ಮಠಸಾಗರ, ಸದಾಶಿವ, ವೆಂಕಟೇಶ್, ರಘು ಚಂಪಕನಗರ ಸೇರಿದಂತೆ ಇತರರು ಹಾಜರಿದ್ದರು.20ಎಸ್.ಕೆ.ಪಿ.ಪಿ 1 ಸಕಲೇಶಪುರ ತಾಲೂಕಿನ ಮಠಸಾಗರ ಗ್ರಾಮದಲ್ಲಿ ನೂತನ ರಸ್ತೆ ಕಾಮಗಾರಿಗೆ ಶಾಸಕ ಸಿಮೆಂಟ್ ಮಂಜು ಗುದ್ದಲಿಪೂಜೆ ನೆರವೇರಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *