
ಬೇಲೂರು.ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ನಾರ್ವೆ ಕೃಷಿ ಪತ್ತಿನ ಸಹಕಾರ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಆವರಣದಲ್ಲಿ ನೆಡೆಯಿತು.ರೈತ ಗೀತೆ ಹಾಡುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು.
ಕಾರ್ಯಕ್ರಮದ ಉದ್ಘಾಟನೆ ಸಂಘದ ಮಾಜಿ ಅಧ್ಯಕ್ಷ ಎನ್. ಎಂ. ಶಿವ ಪ್ರಸಾದ್ ಹಾಗೂ ಗಣ್ಯರು ನೆರೆವೇರಿಸಿದರು.ನಂತರ ಸಂಘದ ಷೇರುದಾರರು ನಿಧನರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಘದ ವತಿಯಿಂದ ಎಸ್. ಎಸ್.ಎಲ್. ಸಿ. ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಸೋಮಯ್ಯ ಮಾತನಾಡಿ ಈ ಸಂಘವು ಪ್ರಾರಂಭ ವಾಗಿ 17ವರ್ಷಆಗಿದೆ, ಸಂಘವು ಹಿಂದೆ ಅಧ್ಯಕ್ಷರು ಮತ್ತು ನಿರ್ದೇಶಕರು ಹಾಗೂ ರೈತ ಭಾಂದವರು ಶ್ರಮದಿಂದ ಒಳ್ಳೆಯ ವ್ಯವಹಾರ ಆಡಳಿತ ಮಾಡಲು ಸಾಧ್ಯ , ಮುಂದಿನ ದಿನಗಳಲ್ಲಿ ಪೇಪರ್ ಲೋಟ ಪೇಪರ್ ತಟ್ಟೆ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದೀವಿ, 2022-23 ಸಾಲಿನ ಸಂಘವು 1.74.827ರೂ ನಿವ್ವಳ ಲಾಭ ಗಳಿಸಿದೆ , ನಮ್ಮ ಸಹಕಾರ ಸಂಘವು ಮಾದರಿ ಯಾಗಲು ರೈತರ ಸಹಕಾರ ಮುಖ್ಯ ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ. ಮದುಕುಮಾರ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಾಶ್ರೀ , ಉಪಾಧ್ಯಕ್ಷ , ಮಲ್ಲಿಕಾರ್ಜುನ , ಸದಸ್ಯ ಮಂಜುನಾಥ್ , ಮಲ್ಲಿಕಾರ್ಜುನ ನಾರ್ವೆ, ಎಫ್. ಪಿ. ಓ. ಅಧ್ಯಕ್ಷ ಸಂಜಯ್ , ನಿರ್ದೇಶಕರಾದ ಕೃಷ್ಣೆಗೌಡ , ಚಿದಾನಂದ್ , ಪ್ರವೀಣ್ , ದೇವರಾಜ್ , ಎಸ್.ವಿ ಚೇತನ್ ಕುಮಾರ್ ,ಗೀತಾಲಕ್ಷ್ಮಣ್ , ಗೋಪಮ್ಮ , ಚಂದ್ರು , ಮೇಲ್ವಿಚಾರಕ ದಿನೇಶ್ ಕುಮಾರ್ , ಕಾರ್ಯನಿರ್ವಾಣಾಧಿಕಾರಿ ಜ್ಯೋತಿ , ಲೆಕ್ಕಾ ಸಹಾಯಕ ಹೇಮರಾಜ್ ಇದ್ದರು.




