ಬೇಲೂರು : ತಾಲ್ಲೂಕಿನ ಅರೇಹಳ್ಳಿಯ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ 60 ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಪ್ರತಿದಿನ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ವಿಘ್ನೇಶ್ವರ ಹೇಳಿದರು.

ಅರೇಹಳ್ಳಿಯಲ್ಲಿ ಗಣೇಶೋತ್ಸವದ ಹಿನ್ನಲೆ ಆಯೋಜಿಸಲಾಗಿರುವ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು .ದಿನಾಂಕ 25-09-2023ರ ಸೋಮವಾರದಂದು ಸರಿಯಾಗಿ 7 ಗಂಟೆಗೆ ತಾಲ್ಲೂಕು ಮಟ್ಟದ ವೇಷಭೂಷಣ ಸ್ಪರ್ಧೆಯಿದ್ದು ಬೇಲೂರು ತಾಲ್ಲೂಕು ವ್ಯಾಪ್ತಿಯ 5 ವರ್ಷ ಒಳಪಟ್ಟ ಮಕ್ಕಳು ಭಾಗವಹಿಸಬಹುದು.

ಪ್ರಥಮ 3,000ರೂ, ದ್ವಿತೀಯ 2,000 ರೂ. ತೃತೀಯ 1,000 ರೂ. ನಗದು ಬಹುಮಾನ ನೀಡಲಾಗುವುದು. ಇದೇ ದಿನ ಬೇಲೂರು ತಾಲೂಕು ವ್ಯಾಪ್ತಿಯ 12 ವರ್ಷ ಒಳಪಟ್ಟ ಮಕ್ಕಳಿಗೆ ವೇಷಭೂಷಣ ಸ್ಪರ್ಧೆಯಿದ್ದು ಪ್ರಥಮ 5,000, ದ್ವಿತೀಯ 3,000 ರೂ. ಹಾಗೂ ತೃತೀಯ 1,000 ರೂ. ಬಹುಮಾನವಿದ್ದು ಎಲ್ಲಾ ಮಕ್ಕಳಿಗೂ ಮುಕ್ತ ಅವಕಾಶವಿದೆ.

ಶ್ರೀಮತಿ ಮಮತ, ಹೆಚ್.ಡಿ ತುಳಸಿದಾಸ್ ಹಾಗೂ ಶ್ರೀ ತುಳಸೀದಾಸ್ ಚಾರಿಟೇಬಲ್ ಟ್ರಸ್ಟ್‌ನ ಪ್ರಾಯೋಜಕತ್ವದಲ್ಲಿ ನಡೆಯುವ ಸ್ಪರ್ಧೆ ಇದಾಗಿದ್ದು ಪ್ರವೇಶ ಉಚಿತವಾಗಿರುವುದರಿಂದ ತಾಲೂಕು ವ್ಯಾಪ್ತಿಯ ಮಕ್ಕಳು ಇದರ ಸದುಯೋಗಪಡಿಸಿಕೊಳ್ಳಬೇಕು.

ಪ್ರತಿದಿನ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

ಈ ವೇಳೆ ಸಮಿತಿಯ ಶಶಿಕುಮಾರ್, ದಿನೇಶ್, ಸುನೀಲ್, ಕುಮಾರ್, ವೀರೂಪಾಕ್ಷ ಹಾಗೂ ಇನ್ನಿತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *