ಕಸ ವಿಲೇವಾರಿ ಮಾಡುವಲ್ಲಿ ವಿಫಲವಾದ ಬೈರಾಪುರ ಗ್ರಾಮ ಪಂಚಾಯಿತಿ ಆಲೂರು : ದೇಶಾದ್ಯಂತ ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಇಂದು ಪ್ರತಿ ತಾಲೂಕು ಹಾಗೂ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಕಸ ವಿಲೇವಾರಿ ಮಾಡಲು ಆಟೋಗಳನ್ನು ನೀಡಿದ್ದು ಪ್ರತಿ ಮನೆಯಿಂದ ಕಸವನ್ನು ಸಂಗ್ರಹಿಸಿ ಒಂದು ಕಡೆ ಕಸ ವಿಲೇವಾರಿ ಮಾಡಬೇಕೆಂದು ಸರ್ಕಾರ ಈಗಾಗಲೇ ತಿಳಿಸಿದ್ದರೂ ಕೂಡ ಎಷ್ಟರಮಟ್ಟಿಗೆ ಇದು ಕಾರ್ಯರೂಪಕ್ಕೆ ಬಂದಿದೆ ಎಂದು ನಾವು ಯೋಚಿಸಬೇಕಾಗಿದೆ ಇಂದು ಕೆಲವೊಂದು ಗ್ರಾಮ ಪಂಚಾಯತಿಗಳು ತಮ್ಮ ಊರಿನ ಮನೆ ಮನೆಯ ಕಸವನ್ನು ಸಂಗ್ರಹಿಸಿ ಊರಿಂದ ಹೊರಗೆ ಅದನ್ನು ವಿಲೇವಾರಿ ಮಾಡುವ ಕೆಲಸವನ್ನು ಮಾಡುತ್ತಿವೆ ಆದರೆ ಇನ್ನೂ ಕೆಲವೊಂದು ಗ್ರಾಮ ಪಂಚಾಯಿತಿಗಳುಈ ಯೋಜನೆ ನಮಗೆ ಅನ್ವಯಿಸುವುದಿಲ್ಲ ಎಂಬಂತೆ ಮೂಗು ಮುಚ್ಚಿ ಕುಳಿತಿವೆ, ಇದಕ್ಕೆ ನಿದರ್ಶನವೆಂಬಂತೆ ತಾಲೂಕಿನ ಬೈರಾಪುರ ಪಂಚಾಯಿತಿಯಲ್ಲಿ ಈಗಾಗಲೇ ಸ್ವಚ್ಛ ಭಾರತ ಅಡಿಯಲ್ಲಿ ಕಸ ವಿಲೇವಾರಿ ಮಾಡಲು ಆಟೋವನ್ನು ನೀಡಿ ವರ್ಷಗಳೇ ಕಳೆದಿದ್ದರೂ ಕೂಡ ಇನ್ನೂ ಗ್ರಾಮದಲ್ಲಿರುವ ಕಸ ವಿಲೇವಾರಿ ಯಾಗುತ್ತಿಲ್ಲ ಗ್ರಾಮದಲ್ಲಿ ಎಲ್ಲಿಂದರಲ್ಲಿ ಕಸ ಹಾಕುತ್ತಿರುವ ದೃಶ್ಯ ಕಂಡು ಬರುತ್ತಿದೆ ಇದನ್ನು ಕಂಡು ಕಾಣದಂತೆ ಪಂಚಾಯ್ತಿ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಕಸದ ವಿಲೇವಾರಿ ಗೆಂದು ಬಂದ ಆಟೋ ಇತರೆ ಕೆಲಸಗಳಿಗೆ ಬಳಕೆಯಾಗುತ್ತಿದೆ. ಇದನ್ನು ಗ್ರಾಮಸ್ಥರು ಕೇಳಿದರೆ ಕೆಲಸಕ್ಕೆ ಬಾರದ ಉತ್ತರ ಹೇಳುತ್ತಾರೆ . ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎತ್ತುಕೊಂಡು ಬೈರಾಪುರದಲ್ಲಿ ಎಲ್ಲೆಂದರಲ್ಲಿ ಬಿಸಾಕುವ ಕಸವನ್ನು ವಿಲೇವಾರಿ ಮಾಡಲು ಪಂಚಾಯತಿ ಅಧಿಕಾರಿಗಳಿಗೆ ಮತ್ತು ಸದಸ್ಯರಿಗೆ ತಿಳಿಸಬೇಕೆಂಬುದೇ ಪತ್ರಿಕೆ ಆಶಯ.

*ವರದಿ : ವ್ಯವಸ್ಥಾಪಕರು ರಾಕೇಶ್, ಶೇಷಾದ್ರಿ ಪ್ರಧಾನ ಸಂಪಾದಕರು ಎಸ್ ಎಮ್ ಮಂಜುನಾಥ್, ಸಂಪಾದಕರು ಉಮೇಶ್ ಎಂ. ಬಿ, ಸಂಕಲನಕಾರರು ಮೋಹನ್ Fcc*

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *