
ಅರೇಹಳ್ಳಿ : ಅರೇಹಳ್ಳಿಯ ಹೋಬಳಿ ಉದುಮನಹಳ್ಳಿಯಲ್ಲಿ ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿಯಿಂದ ಪ್ರತಿಷ್ಟಾಪನೆಯ ಮುಕ್ತಯ ಸಮಾರಂಭ ಕಾರ್ಯಕ್ರಮ ನಡೆಯಿತು .
ಈ ವಿದ್ಯಾ ಗಣಪತಿಯ ವಿಶೇಷವೆಂದರೆ ಮುಸಲ್ಮಾನ್ ಬಂಧುಗಳು ಗಣಪತಿ ಮೂರ್ತಿ ನೀಡಿ ಉದುಮನಹಳ್ಳಿ ಯಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಬಂಧುಗಳು ನಾವೆಲ್ಲಾ ಒಂದೇ ಎಂಬ ಸಂದೇಶ ಸಾರಿದ್ದಾರೆ .
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಾಶ್ರೀ. ಸಮಿತಿ ಅಧ್ಯಕ್ಷ ರವಿ, ತಾ. ಪಂ. ಮಾಜಿ ಸದಸ್ಯ ಸೋಮಯ್ಯ , ಉಪಾಧ್ಯಕ್ಷ ಮಲ್ಲಿಕಾರ್ಜುನ ಸುಲಗಳಲೆ , ಸದಸ್ಯರಾದ ಮಂಜುನಾಥ್, ಮಲ್ಲಿಕಾರ್ಜುನ ನಾರ್ವೆ, ಚಿದಾನಂದ್, ನಿಂಗರಾಜ್. ಚಂದ್ರು , ಶಂಕರ್ , ಸುಂದರ್ , ಶಾಕಿರ್ , ಮಹಮ್ಮದ್ ರೈಸ್ , ಸುರೇಶ್ , ಹಾಗೂ ಗ್ರಾಮಸ್ಥರು ಇದ್ದರು.


