
ಸಕಲೇಶಪುರ : ಅನಾರೋಗ್ಯದಿಂದ ಬಳಲುತ್ತಿದ್ದ ವೃತ್ತಿಯಲ್ಲಿ ಶುಶ್ರೂಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಜರೀನಾ ಅವರು ,ನಂತರ 7 ನೇ ವಾರ್ಡಿನಿಂದ ಜೆಡಿಎಸ್ ಪಕ್ಷದಿಂದ ಸ್ಪರ್ದಿಸಿ ಪುರಸಭೆ ಹಾಲಿ ಸದಸ್ಯರಾಗಿ ಹಾಗೂ ಮಾಜಿ ಉಪಾದ್ಯಕ್ಷರಾಗಿ ಸೇವೆಸಲ್ಲಿಸಿದ ಕುಶಾಲನಗರ ಬಡಾವಣೆಯ ಜರೀನಾ ಅವರು ಇಂದು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.
ಮೃತರ ಆತ್ಮಕ್ಕೆ ಮಾಜಿ ಸಚಿವರಾದ ಹೆಚ್.ಕೆ .ಕುಮಾರಸ್ವಾಮಿ, ಮಾಜಿ ಶಾಸಕ ಹೆಚ್.ಎಂ ವಿಶ್ವನಾಥ್ ಹಾಗೂ ಪುರಸಭೆ ಮಾಜಿ ಅಧ್ಯಕ್ಷರಾದ ಕಾಡಪ್ಪ, ಯಾದ್ಗಾರ್ ಇಬ್ರಾಹಿಂ,ಎಸ್.ಡಿ.ಆದರ್ಶ್, ಮಲ್ನಾಡ್ ಜಾಕೀರ್ ಹಾಗೂ ಪುರಸಭೆ ಸದಸ್ಯರು ಹಾಗೂ ಸಿಬ್ಬಂದಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಮೃತರ ಅಂತ್ಯಕ್ರಿಯೆ ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಂಜೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
