
ಸಕಲೇಶಪುರ :-ಹಾನುಬಾಳು ಹೋಬಳಿ ಅಂಜುಗೋಡನಹಳ್ಳಿ ಗ್ರಾಮದ ಶಾಂತಕುಮಾರ್ ಎಂಬುವರ ಮನೆ ಗಾಳಿ ಮಳೆಗೆ ಸಂಪೂರ್ಣ ಕುಸಿದಿದ್ದು ಸ್ಥಳಕ್ಕೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಸಂತೋಷ್ ಕೆ ಆರ್ ಹಾಗೂ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಪುನಿಕಾಂತ್ ರವರು ಭೇಟಿ ನೀಡಿ ಪರಿಶೀಲಿಸಿದರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಪರಿಹಾರ ನೀಡಲು ಮನವಿ ಮಾಡಿದರು.



