
ಸಕಲೇಶಪುರ : ತಾಲ್ಲೂಕಿನ ಗುತ್ತಿಗೆದಾರ ಸತ್ತಿಗಾಲ್ ಮಹೇಶ್ ಅವರ ಆತ್ಮಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದು ಸಕಲೇಶಪುರ ತಾಲೂಕು ಒಕ್ಕಲಿಗರ ಸಂಘ ತಾಲೂಕು ಆಡಳಿಕ್ಕೆ ಒತ್ತಾಯಿಸಿದೆ.
ಅಕ್ಟೋಬರ್ 2 ರಂದು ತಾಲ್ಲೂಕು ಕಛೇರಿಯಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಆಚರಿಸಲಾದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಾಲ್ಲೂಕು ಒಕ್ಕಲಿಗರ ಸಂಘವು ಜಯಂತಿ ಕಾರ್ಯಕ್ರಮ ಮುಗಿದ ನಂತರ ತಹಸೀಲ್ದಾರ್ ಹಾಗೂ ಶಾಸಕರಾದ ಸಿಮೆಂಟ್ ಮಂಜುನಾಥ್ ಅವರ ಬಳಿ ಚರ್ಚೆ ನಡೆಸಿದ ಸಮಾಜದ ಮುಖಂಡರು ಸೆಪ್ಟೆಂಬರ್ 29 ರಂದು ರಾಘವೇಂದ್ರನಗರ ಬಡಾವಣೆಯ ತಮ್ಮ ವಾಸದ ಮನೆಯಲ್ಲಿ ನೇಣಿಗೆ ಶರಣಾದ ಸತ್ತಿಗಾಲ್ ಅವರ ಸಾವಿಗೆ ಸಂಬಂಧಿಸಿದಂತೆ ಕೆಲವು ವ್ಯಕ್ತಿಗಳು ಮಹೇಶ್ ಗೆ ನೀಡುತ್ತಿದ್ದ ಮಾನಸಿಕ ಕಿರುಕುಳದಿಂದ ಆತ್ಮ ಗೌರವ ಹಾಗೂ ಸ್ವಾಭಿಮಾನಕ್ಕೆ ಅಂಜಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ.
ಮಹೇಶ್ ಸಾವಿನಿಂದ ಅವರ ಕುಟುಂಬ ನೋವು ಅನುಭವಿಸುತ್ತಿದೆ ,ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಜಾಗವನ್ನು ಮಹೇಶ್ ಅವರು ಒತ್ತುವರಿ ಮಾಡಿಕೊಂಡಿದ್ದಾರೆ, ಎಂಬ ಆರೋಪವನ್ನು ಈ ಹಿಂದೆ ತಹಸೀಲ್ದಾರ್ ಅವರ ಅದ್ಯಕ್ಷತೆಯಲ್ಲಿ ಹಾಗೂ ಶಾಸಕರ ಉಪಸ್ಥಿತಿಯಲ್ಲಿ ನಡೆದ ತ್ರೈಮಾಸಿಕ ಎಸ್ಸಿ/ ಎಸ್ಟಿ ಸಭೆಯಲ್ಲಿ ಕೆಲವು ದಲಿತ ಮುಖಂಡರು ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಕ್ಕೆ ಮಂಜೂರಾಗಿರುವ ಜಾಗವನ್ನು ಮೃತ ಮಹೇಶ್ ಅವರು ಒತ್ತುವರಿ ಮಾಡಿಕೊಂಡಿದ್ದಾರೆ ಕೂಡಲೇ ತಾಲ್ಲೂಕು ಆಡಳಿತದ ವತಿಯಿಂದ ಸರ್ವೆಕಾರ್ಯ ಮಾಡಿ ಒತ್ತುವರಿ ಜಾಗವನ್ನು ಬಿಡಿಸಬೇಕು ಎಂದು ಒತ್ತಾಯಿಸಿದ್ದರು.
ಈ ಘಟನೆ ನಡೆದ ಕೆಲವು ದಿನಗಳ ನಂತರ ಮಹೇಶ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಘಟನೆಯಿಂದ ನನ್ನ ಪತಿಯವರು ಸಾಯಲು ಅವರಿಗೆ ನೀಡುತ್ತಿದ್ದ ಮಾನಸಿಕ ಹಿಂಸೆ ಹಾಗೂ ಒತ್ತಡವೇ ಕಾರಣವಾಗಿದ್ದು ,ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ನನ್ನ ಪತಿಯ ಆತ್ಮಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಮೃತ ಮಹೇಶ್ ಅವರ ಪತ್ನಿ ಆಶಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ .
ಇದನ್ನು ನಿಷ್ಪಕ್ಷಪಾತವಾಗಿ ನ್ಯಾಯಾಂಗ ತನಿಖೆಗೆ ಒಪ್ಪಿಸಿ ಮೃತ ಮಹೇಶ್ ಕುಟುಂಬಕ್ಕೆ ನ್ಯಾಯಕೊಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಾಸಕ ಸಿಮೆಂಟ್ ಮಂಜುನಾಥ್ ಮಾತನಾಡಿ ಮೃತ ಮಹೇಶ್ ಅವರು ನನಗೂ ಕೂಡ ಸ್ನೇಹಿತರು ಲಯನ್ಸ್ ಸಂಸ್ಥೆಯಲ್ಲಿ ಒಟ್ಟಿಗೆ ಕೆಲಸ ಮಾಡಿದವರು ಅವರ ಸಾವು ನಿಮಗೆಷ್ಟು ನೋವುಂಟುಮಾಡಿದೆಯೋ ನನಗೂ ಅಷ್ಠೇ ನೋವಾಗಿದೆ ಈ ವಿಷಯದಲ್ಲಿ ನಾನು ಪ್ರಾಮಾಣಿಕವಾಗಿ ನ್ಯಾಯುತವಾಗಿ ತನಿಖೆ ನಡೆಸಿ ನೊಂದ ಕುಟುಂಬಕ್ಕೆ ನ್ಯಾಯಕೊಡಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಹಾಗೂ ಒಕ್ಕಲಿಗರ ಸಂಘದ ಅದ್ಯಕ್ಷ ಹೆಚ್.ಎಂ.ವಿಶ್ವನಾಥ್, ಕಾರ್ಯದರ್ಶಿ ಉಮೇಶ್ ,ನಿವೃತ್ತ ತಹಸೀಲ್ದಾರ್ ಅಣ್ಣೇಗೌಡ ,ಕೊತ್ತನಹಳ್ಳಿ ತಮ್ಮಣ್ಣಗೌಡ ,ನಂದಿಕೃ ದೇವರಾಜು ,ಜೈಮಾರುತಿ ದೇವರಾಜು ,ಕರಡಿಗಾಲ ಕೃಷ್ಣೇಗೌಡ ,ಎಸ್.ಡಿ.ಆದರ್ಶ್ ,ರಾಜೇಗೌಡ, ಇತರರು ಇದ್ದರು.
