ಸಕಲೇಶಪುರದ :- ತಾಲ್ಲೂಕಿನ ವಿಧಾನಸಭಾ ಕ್ಷೇತ್ರದ ಮೊಟ್ಟ ಮೊದಲ ಶಾಸಕರು ಹಾಗೂ ಪುರಸಭೆ ಅಧ್ಯಕ್ಷರು ವಾಸಣ್ಣ ಶೆಟ್ಟರ ಅವರ ದ್ವಿತೀಯ ಪುತ್ರ, ಖ್ಯಾತ ಉದ್ಯಮಿಗಳಾದ ಎಸ್. ವಿ ದ್ವಾರಕನಾಥ್ (73) ಇಂದು ಮುಂಜಾನೆ ನಿಧನರಾಗಿದ್ದಾರೆ.

ದ್ವಾರಕನಾಥ್ ರವರ ನಿಧನಕ್ಕೆ ಸಕಲೇಶಪುರ, ಆಲೂರು ಹಾಗೂ ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜುನಾಥ್ ಸಂತಾಪ ಸೂಚಿಸಿದ್ದಾರೆ.

ವಾಸಣ್ಣ ಶೆಟ್ಟರ ಕುಟುಂಬದ ಜೊತೆಗೆ ಆತ್ಮೀಯತೆ ಹೊಂದಿರುವ ಶಾಸಕರು ವಾಸಣ್ಣ ಶೆಟ್ಟರ ತೃತೀಯ ಪುತ್ರ ಹರೀಶ್ ಅವರ ಬಳಿ ಉದ್ಯೋಗ ಮಾಡಿದ ಅನುಭವಗಳನ್ನು ಮೆಲುಕು ಹಾಕಿದ್ದಾರೆ .

ದ್ವಾರಕನಾಥ್ ರವರ ನಿಧನದ ನೋವನ್ನು ಅವರ ಕುಟುಂಬದವರು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತನ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.ವಾಸಣ್ಣ ಶೆಟ್ಟಿ ರವರು 1962 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸಕಲೇಶಪುರ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *