
ಸಕಲೇಶಪುರ :-ತಾಲ್ಲೂಕಿನ ಹೆತ್ತೂರು ಹೋಬಳಿಯ ವಲಳಹಳ್ಳಿ ಗ್ರಾಮಪಂಚಾಯಿತಿಯಲ್ಲಿ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ವತಿಯಿಂದ ವಲಳಹಳ್ಳಿ ಕೂಡಿಗೆ ಬೆಳೆಗಾರರ ಸಂಘದ ಆವರಣದಲ್ಲಿ ಸಾವಯವ ಕೃಷಿ ಕುರಿತು ಮಾಹಿತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಯಿತು.
ಈ ಕಾರ್ಯಕ್ರಮವನ್ನು ಸಕಲೇಶಪುರ ತಾಲ್ಲೂಕು ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಮೇಲ್ವಿಚಾರಕರದ ಪರಮೇಶ್ ಉದ್ಘಾಟನೆ ಮಾಡಿದರು , ನಂತರ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಗಾಳಿ,ಕುಡಿಯುವ ನೀರು, ತಿನ್ನುವ ಆಹಾರವು ವಿಷಯುಕ್ತವಾಗುತ್ತಿದೆ, ಇದರಿಂದ ಮನುಷ್ಯನ ಆರೋಗ್ಯದಲ್ಲಿ ಸಮಸ್ಯೆಗಳ ಜೊತೆಗೆ ಜೀವಿತಾವಧಿಯು ಕೂಡ ಸರಾಸರಿಯಲ್ಲಿ ಕುಂಠಿತಗೊಳ್ಳುತ್ತಿದೆ.
ಸಂಘದ ಮೂಲಕ ವ್ಯಕ್ತಿ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಅನೇಕ ರೀತಿಯ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಯಶಸ್ವಿಯಾಗುತ್ತಾ ಬಂದಿದೆ. ಇದರ ಮುಂದಿನ ಹೆಜ್ಜೆ ಎಂಬಂತೆ, ಕೃಷಿಗೆ ಸಂಬಂಧ ಪಟ್ಟಂತೆ ರೈತರು ಬೆಳೆಯುವ ಬೆಳೆಗಳಲ್ಲಿ ಹೆಚ್ಚಿನ ಪ್ರಮಾಣದ ಸಾವಯವ ಪದ್ದತಿಯನ್ನು ರೂಡಿಗೊಳಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ, ಸಂಸ್ಥೆಯ ಮೂಲಕ ಬೆಳೆಗಾರರ ಆರೋಗ್ಯಕ್ಕಾಗಿ ಸಾವಯವ ಕೃಷಿ ಸಂಬಂಧಿಸಿದಂತೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರೊಂದಿಗೆ ಈ ಮೂಲಕ ಜಾಗೃತಿ ಮೂಡಿಸುತ್ತಿದೆ.
ರೈತರು ಸಾವಯವ ಕೃಷಿಯನ್ನು ತೊಡಗಿಸಿಕೊಳ್ಳುವ ಮೂಲಕ ಉತ್ಪಾದನೆಯಲ್ಲಿ ಹೆಚ್ಚು ಹಾಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ವಿಷಯುಕ್ತವಾದ ಆಹಾರ ಪದಾರ್ಥಗಳ ತೇಜಿಸಲು ಸಾವಯವ ಕೃಷಿಗೆ ಕೊಡುವ ಮೂಲಕ ಉತ್ತಮ ಆರೋಗ್ಯಕ್ಕಾಗಿ ಉತ್ತಮ ಆಹಾರವನ್ನು ಸೇವಿಸುವಂತಾಗಬೇಕು.
ಕಾರ್ಯಕ್ರಮದ ಮಾಹಿತಿಯನ್ನು ತಿಳಿದುಕೊಳ್ಳುವುದರ ಜೊತೆಗೆ ಬೆಳೆಗಾರರು ಅದನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳುವಂತಾಗಲಿ ಎಂದು ಸಕಲೇಶಪುರ ತಾಲ್ಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಮೇಲ್ವಿಚಾರಕರದ ಪರಮೇಶ್ ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಾವಯುವ ಮಾದರಿ ಕೃಷಿಕರಾದ ಕುಮಾರಿ ಮಂಜುಳಾ ಅವರು ” ಸಸ್ಯ ಜನ್ಯ ಹಾಗೂ ಪ್ರಾಣಿ ಜನ್ಯ ಮೂಲಕ ತಯಾರಿಸಿದ ಸಾವಯವ ಗೊಬ್ಬರವನ್ನು ಉಪಯೋಗಿಸುವ ಜೊತೆಗೆ ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಹಾಗೂ ಮುಂದಿನ ಪೀಳಿಗೆಗೂ ಇದನ್ನು ಬಳಸುವಂತೆ ಮಾರ್ಗದರ್ಶನ ಮಾಡಬೇಕು ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳ ಹುಟ್ಟಿಗೆ ಸಾವಯವ ಗೊಬ್ಬರ ಅತ್ಯಂತ ಉಪಯುಕ್ತವಾದದ್ದು, ಜೊತೆಗೆ ಜೀವಾಮೃತವು ಉತ್ತಮ ರೀತಿಯ ಬೆಳೆಗೆ ಸಹಾಯಕವಾಗಿದೆ. ಇದನ್ನು ಉಪಯೋಗಿಸಿಕೊಳ್ಳುವ ಮೂಲಕ ರೈತರು ಉತ್ತಮವಾದ ಬೆಳೆಯನ್ನು ಬೆಳೆಯುವುದರೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕುಎಂದು ತಿಳಿಸಿದರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕಾರ್ಯದರ್ಶಿ ವಲಳಹಳ್ಳಿ ನಾಗೇಶ್ ಕೆರೆಮನೆ ಮಾತನಾಡಿ ಈ ಸಂಘದಲ್ಲಿ ಸದಸ್ಯರಿಗೆ ಹಣಕಾಸಿನ ವ್ಯವಹಾರ ಮಾಡುವುದಲ್ಲದೆ, ಆರೋಗ್ಯಕ್ಕೆ ಸಂಬಂಧಪಟ್ಟಂತೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಇಂತಹ ಒಳ್ಳೆ ಕೆಲಸವನ್ನು ಸದುಪಯೋಗ ಮಾಡಿಕೊಳ್ಳಬೇಕು. ಈ ಆಧುನಿಕ ಯುಗದಲ್ಲಿ ಸಾವಯವ ಕೃಷಿ ಅತ್ಯಂತ ಮುಖ್ಯವಾದದ್ದು, ನಮ್ಮ ಉತ್ತಮ ಆರೋಗ್ಯಕ್ಕಾಗಿ ರೈತರು ಹೆಚ್ಚಾಗಿ ಸಾವಯುವ ಕೃಷಿಗೆ ಒತ್ತು ಕೊಡಬೇಕು ಎಂದರು.
ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಹಾಗೂ ಶ್ರೀ ಧರ್ಮಸ್ಥಳ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಾವಯವ ಕೃಷಿಗೆ ಸಂಬಂಧಪಟ್ಟಂತೆ ಮಾಹಿತಿಯನ್ನು ತಿಳಿದುಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
