
ಶಾರ್ಪ್ ಶೂಟರ್ ವೆಂಕಟೇಶ್ ಸಾವಿನ ನಂತರ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಅರವಳಿಕೆ ಮದ್ದು ನೀಡುವ ತರಬೇತಿಯನ್ನು ನೀಡದಿರುವುದು ಅರಣ್ಯ ಇಲಾಖೆಯ ಬೇಜವಬ್ದಾರಿಗೆ ಕಾರಣವಾಗಿದೆ.
ಆಲೂರು ಬೇಲೂರು ಸಕಲೇಶಪುರ ಈ ಭಾಗದಲ್ಲಿ ನಿರಂತರ ಕಾಡಾನೆ ಹಾವಳಿ ಹೆಚ್ಚಾಗಿದ್ದು ಕಾಡಾನೆಗಳನ್ನು ಹಿಡಿದು ವಿಡಿಯೋ ಕಾಲರ್ ಅಥವಾ ಶಸ್ತ್ರ ಚಿಕಿತ್ಸೆ ಇನ್ನಿತರ ಕಾರ್ಯಾಚರಣೆಗೆ ಪರಿಣಿತರನ್ನು ತಯಾರು ಮಾಡುವ ಹಾಗೂ ಅರವಳಿಕೆ ತಜ್ಞರ ಕೊರತೆ ಇರುವುದು ಮತ್ತು ಅನುಭವ ಕೊರತೆಯೂ ಇದೆ.
ಇದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಗಮನ ಹರಿಸಬೇಕು ಇಲ್ಲದಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ತಾಲ್ಲೂಕು ಅಧ್ಯಕ್ಷ ರಮೇಶ್ ಪೂಜಾರಿ ಹಾಗೂ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.
