
ಸಕಲೇಶಪುರ/ ಆಲೂರು ತಾಲೂಕುಗಳ ದಲಿತ ಹಿತರಕ್ಷಣಾ ಸಭೆಯು ಡಿವೈಎಸ್ಪಿ ಪ್ರಮೋದ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ಎಪಿಎಂಸಿ ಪಕ್ಕದಲ್ಲಿರುವ ಟಿ.ಎ.ಪಿ.ಸಿ.ಎಂ.ಎಸ್ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ವಿನಾಕಾರಣ ದಲಿತ ಮುಖಂಡರ ಮೇಲೆ ಸತ್ತಿಗಾಲ್ ಮಹೇಶ್ ಆತ್ಮಹತ್ಯೆಗೆ ಸಂಬಂದಿಸಿದಂತೆ ಕೇಸು ದಾಖಲಿಸಿರುವುದು ಸರಿಯಾದ ಕ್ರಮವಲ್ಲ ಇದರ ಬಗ್ಗೆ ನ್ಯಾಯಯುತ ತನಿಖೆ ನಡೆಸಿ ಮಹೇಶ್ ಅವರು ಸಾಯುವ ಮುನ್ನ ಮೊಬೈಲ್ ನಲ್ಲಿ ಸಂಭಾಷಣೆ ಮಾಡಿರುವುದನ್ನು ದಾಖಲಿಸಿ ತನಿಖೆ ಕೈಗೊಂಡು ಅಮಾಯಕ ದಲಿತ ಮುಖಂಡರ ಮೇಲೆ ಹಾಕಿರುವ ಸುಳ್ಳು ಕೇಸು ವಾಪಸ್ಸು ಪಡೆಯಬೇಕು ಎಂದು ದಲಿತ ಮುಖಂಡ ಆಚಂಗಿ ದೇವರಾಜು ಪ್ರಸ್ತಾಪ ಮಾಡಿದರು.
ಹಳ್ಳಿಗಳಲ್ಲಿ ಅಕ್ರಮ ಮದ್ಯಮಾರಾಟ ಹೆಚ್ಚಾಗಿದ್ದು ಇದನ್ನು ಅಬಕಾರಿ ಇಲಾಖೆಯವರು ತಡೆಯುವಲ್ಲಿ ವಿಫಲರಾಗಿದ್ದಾರೆ.ಎಂಬ ಆರೋಪಗಳು ಕೇಳಿಬಂದವು.ಹಾನುಬಾಳು ಹೋಬಳಿ ಮಗಜಹಳ್ಳಿ ಗ್ರಾಮದ ಸುನೀಲ್ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂದಿಸಿದಂತೆ ಆ ಯುವಕನ ಸಾವಿಗೆ ನ್ಯಾಯ ಕೊಡಬೇಕು ಮತ್ತು ಅವನ ಸಾವಿಗೆ ಕಾರಣವಾದ ಕಾಣದ ಕೈಗಳ ಬಗ್ಗೆ ತನಿಖೆ ನಡೆಸುವ ಮೂಲಕ ನ್ಯಾಯಕೊಡಬೇಕು ಎಂದು ಜಾನಕೆರೆ ಲೋಕೇಶ್ ಪ್ರಸ್ತಾಪ ಮಾಡಿದರು.
ಇದೆ ಸಂದರ್ಭದಲ್ಲಿ ಆಲೂರು ತಾಲೂಕಿನ ಅನೇಕ ಸಮಸ್ಯೆಗಳ ಬಗ್ಗೆ ಮುಖಂಡರು ಪ್ರಸ್ತಾಪ ಮಾಡಿದರು ಸಭೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ನಿರಂಜನ್ ಕುಮಾರ್, ಆಲೂರು ಠಾಣೆ ಪಿ ಐ.ಗಂಗಾಧರ, ಸಕಲೇಶಪುರ ನಗರ ಠಾಣೆ ಪಿ.ಎಸ್.ಐ. ಪ್ರಮೋದ್ ಕುಮಾರ್, ಗ್ರಾಮಾಂತರ ಠಾಣೆ ಪಿ.ಎಸ್.ಐ.ಸದಾಶಿವ ತಿಪ್ಪಾರೆಡ್ಡಿ.ಯಸಳೂರು ಠಾಣಾ ಪಿ.ಎಸ್.ಐ. ಶ್ರೀನಿವಾಸ್. ನಗರ ಠಾಣೆ ಅಪರಾದ ಪಿಸ್ ಐ.ಕೃಷ್ಣಪ್ಪ. ಇದ್ದರು


