ಖಾಸಗಿ ವಲಯದ ಅತಿ ದೊಡ್ಡ ಚಿನ್ನದ ಗಣಿಯು ಮುಂದಿನ ವರ್ಷದ ಕೊನೆಯ ಹೊತ್ತಿಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ ಎಂದು ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಹನುಮ ಪ್ರಸಾದ್ ತಿಳಿಸಿದ್ದಾರೆ.

ಡೆಕ್ಕನ್‌ ಗೋಲ್ಡ್‌ ಮೈನ್ಸ್‌ ಲಿ.(ಡಿಜಿಎಂಎಲ್‌) ಬಾಂಬೆ ಷೇರು ವಿನಿಮಯ ಕೇಂದ್ರದಲ್ಲಿ ನೋಂದಣಿಯಾಗಿರುವ ದೇಶದ ಏಕೈಕ ಚಿನ್ನ ಶೋಧ ಸಂಸ್ಥೆಯಾಗಿದೆ.

ಖಾಸಗಿ ಕ್ಷೇತ್ರದ ಮೊದಲ ಚಿನ್ನದ ಗಣಿಯನ್ನು ಜಿಯೊಮೈಸೂರ್‌ ಸರ್ವಿಸಸ್‌ ಲಿ. ಕಂಪನಿಯು ಅಭಿವೃದ್ಧಿಪಡಿಸುತ್ತಿದೆ. ಈ ಗಣಿಯು ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಜೊನ್ನಗಿರಿಯಲ್ಲಿದೆ. 2013ರಲ್ಲಿ ಗಣಿ ಮಂಜೂರು ಆಗಿತ್ತು. ಯೋಜನೆಯನ್ನು ಜಾರಿಗೊಳಿಸಲು 8-10 ವರ್ಷಗಳು ಬೇಕಾದವು. ಡಿಜಿಎಂಎಲ್‌ನ ಇನ್ನೊಂದು ಚಿನ್ನದ ಗಣಿ ಯೋಜನೆ ಕಿರ್ಗಿಸ್ತಾನದಲ್ಲಿದೆ.

ಈ ಯೋಜನೆಯಲ್ಲಿ ಡಿಜಿಎಂಎಲ್‌ ಶೇ 60ರಷ್ಟು ಪಾಲು ಹೊಂದಿದೆ. ಇದು 2024ರ ನವೆಂಬರ್‌ ಒಳಗೆ ಕಾರ್ಯಾಚರಣೆ ಆರಂಭಿಸಲಿದೆ ಎಂದು ಪ್ರಸಾದ್‌ ವಿವರಿಸಿದ್ದಾರೆ. ಚಿನ್ನ ಶೋಧದಲ್ಲಿ ಡಿಜಿಎಂಎಲ್‌ಗೆ ವ್ಯಾ‍ಪಕ ಅನುಭವ ಇದೆ. ಕರ್ನಾಟಕದ ಹಟ್ಟಿಯಲ್ಲಿನ ಚಿನ್ನದ ನಿಕ್ಷೇಪ ಪತ್ತೆಯಲ್ಲಿಯೂ ಈ ಕಂಪನಿ ಮಹತ್ವದ ಪಾತ್ರ ವಹಿಸಿತ್ತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *