ಸಕಲೇಶಪುರ :-ಪಟ್ಟಣದ ಬಿಎಂ ರಸ್ತೆಯಲ್ಲಿ ಸಂಚರಿಸುವ ಸಾವಿರಾರು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿರುವ ಹೇಮಾವತಿ ಸೇತುವೆಯ ಶ್ರೀನಿವಾಸ ಕನ್ವೆನ್ಷನ್ ಹಾಲ್ ನಿಂದ ತೇಜಸ್ವಿ ಚಿತ್ರಮಂದಿರದ ವರೆಗೆ ಈಗಾಗಲೇ ಸಾರ್ವಜನಿಕರ ಮಾಹಿತಿಯಂತೆ ಬಿಎಂ ರಸ್ತೆಯ ಪಕ್ಕದಲ್ಲಿರುವ ಪುರಸಭೆಯ ಜಾಗವನ್ನು ಶ್ರೀನಿವಾಸ ಕನ್ವೆನ್ಷನ್ ಹಾಲ್ ವರೆಗೆ ಮಾತ್ರ ತೆರವುಗೊಳಿಸಿದ್ದು ಮುಂದುವರಿದಂತೆ ತೇಜಸ್ವಿ ಸರ್ಕಲ್ ಬಳಿಯವರೆಗೆ ಅಕ್ರಮವಾಗಿ ಒತ್ತುವರಿದಾರರನ್ನು ತೆರವುಗೊಳಿಸಿ ಎಲ್ಲ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿ ಸಾರ್ವಜನಿಕರು ಈ ರಸ್ತೆಯಲ್ಲಿ ಜೀವ ಭಯದಿಂದ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ.

ಅಲ್ಲದೆ ಹಲವಾರು ಅಪಘಾತಗಳಾಗಿರುತ್ತದೆ ಇದರಿಂದ ಮುಗ್ಧ ಜನರು ಪ್ರಾಣಾಪಾಯಗಳನ್ನು ಎದುರಿಸುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ,ಆದುದರಿಂದ ಸಾರ್ವಜನಿಕರ ಹಿತ ದೃಷ್ಟಿಯಿಂದ ಅಕ್ರಮವಾಗಿ ಒತ್ತುವರಿ ತೆರವುಗೊಳಿಸಿ ಸಾರ್ವಜನಿಕರು ಭಯಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಮಾನ್ಯ ಶಾಸಕರಲ್ಲಿ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಜೀವನ್ ಗೌಡ ಜಿಲ್ಲಾಧ್ಯಕ್ಷರು. ವಿಜಯ್ ಕುಮಾರ್ ತಾಲೋಕು ಅಧ್ಯಕ್ಷರು,ಎಂ ಪಿ ಮಹೇಶ್ ಜಿಲ್ಲಾ ಕಾರ್ಯದರ್ಶಿ, ಗ್ರಾಮೀಣ ಉಪಾಧ್ಯಕ್ಷ ವಿಜಿ ಕುಮಾರ್ ಗುಡಾನಕೆರೆ, ನಗರ ಅಧ್ಯಕ್ಷ ಸಂತೋಷ, ತಾಲೋಕು ಕಾರ್ಯದರ್ಶಿ ಮಂಜುನಾಥ್, ನಗರ ಕಾರ್ಯದರ್ಶಿ ಕಿಟ್ಟಿ, ಬೈಕೆರೆ ಪ್ರಸನ್ನ ಮುಂತಾದವರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *