
ಸಕಲೇಶಪುರ :-ತಾಲ್ಲೂಕಿನ ಪಶ್ಚಿಮ ಘಟ್ಟ ವ್ಯಾಪ್ತಿಯ ಬಿಸಿಲೆ ರಕ್ಷಿತಾ ಅರಣ್ಯ ಪ್ರದೇಶದಲ್ಲಿ ಸುಮಾರು ಹತ್ತು ಚೀಲಕ್ಕೂ ಹೆಚ್ಚು ಪ್ಲಾಸ್ಟಿಕ್ ಇತರ ತಾಜಾ ವಸ್ತುಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಭಾನುವಾರ ಸಂಗ್ರಹಿಸಿದರು,
69ನೇ ವನ್ಯಜೀವಿ ಸಪ್ತಹ ಅಂಗವಾಗಿ 30ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಬಿಸಿಲೆ ಅರಣ್ಯ ಬಿಸಿಲೆ ವೀಕ್ಷಣ ಗೋಪುರ, ಚೌಡೇಶ್ವರಿ ದೇವಾಲಯ ಸುಮಾರು 18 ಕಿಲೋಮೀಟರ್ ಅರಣ್ಯ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ಹಮ್ಮಿಕೊಂಡಿತ್ತು ಹಾಸನ ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರವಾದ ಬಿಸಿಲೆ ಭಾಗದಲ್ಲಿ ಅತಿ ಹೆಚ್ಚು ಪ್ರವಾಸಿಗರು ಆಗಮಿಸುವುದರಿಂದ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಹಾಗೂ ಮಧ್ಯದ ಬಟ್ಟೆಗಳನ್ನು ಬಿಸಾಡಿದ್ದು, ಅರಣ್ಯ ಇಲಾಖೆಯವರು ಸಂಗ್ರಹಿಸಿದರು.
ನಂತರ ಸಿಬ್ಬಂದಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ವಲಯ ಅರಣ್ಯಾಧಿಕಾರಿ ಸೋಮಶೇಖರ್ ಪ್ರವಾಸಿಗರು ಪ್ರವಾಸಿಗೆ ಆಗಮಿಸುವಾಗ ಜವಾಬ್ದಾರಿಯಾಗಿ ವರ್ತಿಸಿ ಎಲ್ಲೆಂದರಲ್ಲಿ ಕಸ ಹಾಗೂ ಪ್ಲಾಸ್ಟಿಕ್ ಬಿಸಾಡುವುದರಿಂದ ವನ್ಯಜೀವಿಗಳ ಆರೋಗ್ಯಕ್ಕೆ ತೊಂದರೆ ಉಂಟು ಮಾಡಬಾರದು ಹಾಸನ ಜಿಲ್ಲೆಯ ಅತಿ ಸೂಕ್ಷ್ಮ ಪ್ರದೇಶವಾದ ಈ ಅರಣ್ಯ ಭಾಗದಲ್ಲಿ ಅಳಿವಿನ ಅಂಚಿನಲ್ಲಿರುವ ಸೂಕ್ಷ್ಮ ವನ್ಯಜೀವಿಗಳು ನೆಲೆಸಿದ್ದು ಪರಿಸರ ಹಾಗೂ ವನ್ಯಜೀವಿಗಳನ್ನು ಉಳಿಸುವುದು ಅರಣ್ಯ ಇಲಾಖೆ ಸಿಬ್ಬಂದಿಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಂಗಡಹಳ್ಳ ಭಾಗದ ವಲಯ ಅಧಿಕಾರಿ ನರಸಿಂಹಮೂರ್ತಿ ಚಂಗಡಹಳ್ಳಿ ಭಾಗದ ಅರಣ್ಯ ವಲಯ ಅಧಿಕಾರಿ ಪ್ರವೀಣ್ ಗಸ್ತು ಅರಣ್ಯ ಪಾಲಕರಾದ ಗೋವಿಂದರಾಜ್ ದಯಾನಂದ್ ರವಿ ಜಿಜಿ ಹಾಗೂ ಸುಮಾರು 25ಕ್ಕೂ ಹೆಚ್ಚು ಸಿಬ್ಬಂದಿಗಳು ಉಪಸ್ಥಿತರಿದ್ದರು.
