ಸಕಲೇಶಪುರ : ಇಲ್ಲಿನ ಮೂರು ದಿನಗಳ ಸಮುದಾಯ ವಾಸ್ತವ್ಯ ಶಿಬಿರದ ಉದ್ಘಾಟನೆಯನ್ನು ಆಲೂರು ತಾಲ್ಲೂಕಿನ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಧೀಶರರಾದ ಶ್ರೀಮತಿ ನಿರ್ಮಲಾ ಎಂ.ಸಿ ರವರು ದೀಪ ಬೆಳಗಿಸಿ ಉದ್ಘಾಟಿಸಸಿದರು.

ಶಿಕ್ಷಕರು ಉತ್ತಮ ಸಮಾಜದ ನಿರ್ಮಾತೃಗಳು, ಉತ್ತಮ ಪ್ರಜೆಗಳಾಗಿ ರೂಪಿಸುವವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ತಿಳಿಸಿ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಶುಭ ಹಾರೈಸಿದರು.

ವಕೀಲರಾದ ಶ್ರೀ ನಾಗರಾಜ್ ಕೆಜಿ ರವರು ಮಾತನಾಡುತ್ತಾ ನಾವು ವಿವೇಕಾನಂದರ ಆದರ್ಶವನ್ನು ಪಾಲಿಸಬೇಕು ನಮಗೆ ಎಲ್ಲಾ ವಿದ್ಯಾರ್ಥಿಗಳನ್ನು ಬೆಳೆಸುವ ಘನ ಜವಾಬ್ದಾರಿ ಇದೆ, ಶಿಕ್ಷಕ ವೃತ್ತಿ ಎಲ್ಲಾ ವೃತ್ತಿಗಳಿಗಿಂತಲೂ ಪವಿತ್ರವಾದುದು ಎಂದು ತಿಳಿಸುತ್ತಾ ಇಂದು ಹೆಣ್ಣು ಮಕ್ಕಳ ದಿನವಾಗಿದ್ದು ಅದರ ಮಹತ್ವವನ್ನು ತಿಳಿಸಿದರು.

ಶಿಬಿರದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮರಸುಹೊಸಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಪ್ರಕಾಶ್ ಎಂ.ಎಸ್ ರವರು ತಮ್ಮ ಬಿ.ಇಡಿಯ ಸಂದರ್ಭದಲ್ಲಿ ನಡೆದ ಸಮುದಾಯ ವಾಸ್ತವ್ಯ ಶಿಬಿರವನ್ನು ನೆನಪಿಸಿಕೊಳ್ಳುತ್ತಾ ಎಲ್ಲರೂ ಮುಂದಿನ ದಿನಗಳಲ್ಲಿ ಒಳ್ಳೆಯ ಶಿಕ್ಷಕರಾಗಿ ಶಿಕ್ಷಕ ಹುದ್ದೆಗೆ ತಕ್ಕಂತೆ ಘನತೆಯನ್ನು ಬೆಳೆಸಿಕೊಳ್ಳಬೇಕು, ಶಿಕ್ಷಕರು ತಪ್ಪು ಮಾಡಿದರೆ ಒಂದು ಮುಂದಿನ ಸಮುದಾಯವೇ ತಪ್ಪು ಮಾಡಿದಂತೆ, ಆದುದರಿಂದ ಸರಿಯಾಗಿ ದಾರಿಯಲ್ಲಿ ನಡೆಸುವ ಜವಾಬ್ದಾರಿ ಶಿಕ್ಷಕರಿಗೆ ಇದೆ.

ನಮ್ಮ ಜ್ಞಾನವು ನಮ್ಮ ನಡವಳಿಕೆಯಲ್ಲಿ ಪ್ರತಿಬಿಂಬ ಆಗಬೇಕು. ಶಿಕ್ಷಿತರು ಸಮಾಜವನ್ನು ಪರಿವರ್ತನೆ ಮಾಡಬೇಕು. ನಮ್ಮ ಶಿಕ್ಷಣಕ್ಕೆ ಅರ್ಥ ಬರಬೇಕಾದರೆ ಸಮಕಾಲೀನ ಶಿಕ್ಷಣದ ಮಹತ್ವವನ್ನು ತಿಳಿಯಬೇಕು ಎಂದು ಹೇಳುತ್ತಾ ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದಡೆ ಆಗಲಿ ಮಹಾಪ್ರಸಾದವೆಂದೆನಯ್ಯಾ ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದಡೆ ಆಗಲಿ ಮಹಾಪ್ರಸಾದವೆಂದೆನಯ್ಯಾ. ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದಡೆ ಆಗಲಿ ಮಹಾಪ್ರಸಾದವೆಂದೆನಯ್ಯಾ. ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದಡೆ ಆಗಲಿ ಮಹಾಪ್ರಸಾದವೆಂದೆನಯ್ಯಾ ಗುಹೇಶ್ವರಾ ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾನು ಬೆರಗಾದೆನು ಎಂದು ಅಲ್ಲಮನ ವಚನವನ್ನು ಹೇಳಿ ಕಾಲ ಮತ್ತು ಯುಗಧರ್ಮವನ್ನು ಈಗಿನ ವಿದ್ಯಾರ್ಥಿಗಳ ಮನೋಭಾವವನ್ನು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಣತ್ತೂರು ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಅಧ್ಯಕ್ಷರು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಆದ ಶ್ರೀ ಪೃಥ್ವಿ ಜಯರಾಮ್ ಶಿಭಿರಾರ್ಥಿಗಳಿಗೆ ಶುಭ ಹಾರೈಸಿದರು.

ಶಿಬಿರದ ಸಂಚಾಲಕರಾದ ಡಾ|| ವಿಕ್ರಮ್ ಸಿ.ಬಿ ರವರು ಶಿಬಿರಾರ್ಥಿಗಳಿಗೆ ಶಿಕ್ಷಕರು ಸಮುದಾಯದೊಂದಿಗೆ ಹೇಗೆ ವರ್ತಿಸಬೇಕೆಂದು ತಿಳಿಸಿ ಶಿಬಿರದ ಯಶಸ್ಸಿಗೆ ನಮ್ಮೆಲ್ಲರ ಸಂಪೂರ್ಣ ಪಾಲ್ಗೊಳ್ಳುವಿಕೆ ಬಹು ಮುಖ್ಯ ಎಂದು ತಿಳಿಸಿದರು.

ಶಿಬಿರದ ಮಾರ್ಗದರ್ಶಕರಾದ ಶ್ರೀ ಮಂಜುನಾಥ್ ಆರ್ ರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸಮಯ ಪ್ರಜ್ಞೆ ಮತ್ತು ಕರ್ತವ್ಯನಿಷ್ಠೆ ಇದರ ಬಗ್ಗೆ ತಿಳಿಸುತ್ತಾ ಶಿಬಿರದ ಉದ್ದೇಶ ತಿಳಿಸಿದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ||ನಂಜುಂಡಪ್ಪ ಎಸ್ ರವರು ಶಿಬಿರಾರ್ಥಿಗಳಿಗೆ ಅವಶ್ಯವಿರುವ ಶಿಸ್ತಿ ಹಾಗೂ ಸಮಯ ಪ್ರಜ್ಞೆ ಬಗ್ಗೆ ತಿಳಿಸುತ್ತಾ ಶಿಬಿರಾರ್ಥಿಗಳಿಗೆ ಶುಭಹಾರೈಸಿದರು.ಪ್ರಾರ್ಥನೆಯನ್ನು ಕುಮಾರಿ ಎಲಿಜಬೆತ್ ಸೋನಿ, ಕುಮಾರಿ ಅಮೃತಾ, ಕುಮಾರು ಚಾಂದಿನಿ ನೆರವೇರಿಸಿದರು.

ಉದ್ಘಾಟನಾ ಕಾರ್ಯವನ್ನು ಸುನೀತಾ ಸ್ವಾಗತಿಸಿದರು.ಉದ್ಘಾಟನಾ ಸಂದರ್ಭದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಶ್ರೀ ಸುರೇಶ್ ಆರ್.ಬಿ, ಶಿಬಿರದ ಸಹ ಸಂಚಾಲಕರಾದ ಹೆಚ್.ಬಿ ತಮ್ಮಯ್ಯ, ಮಹೇಶ್ ರವರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *