ಸಕಲೇಶಪುರ : ಪಟ್ಟಣದಲ್ಲಿ ವ್ಯಾಪಾರ ಮಾಡಿಕೊಂಡಿರುವ ವ್ಯಾಪಾರಸ್ತರನ್ನು ಏಕಾಏಕಿ ಖಾಲಿ ಮಾಡುವಂತೆ ಪುರಸಭೆಯ ಅಧಿಕಾರಿಗಳು ಸೂಚನೆ ನೀಡಿರುವುದನ್ನು ಮಾನವ ಹಕ್ಕಗಳ ರಕ್ಷಣಾ ಸಮಿತಿಯ ಜಿಲ್ಲಾದ್ಯಕ್ಷ ಅಧ್ಯಕ್ಷ ಜೀವನ್ ಗೌಡ ಖಂಡಿಸಿದ್ದಾರೆ .

ಪುರಸಭೆಯ ಅಧಿಕಾರಿಗಳು ಬೀದಿಬದಿ ವ್ಯಾಪಾರ ಮಾಡಿಕೊಂಡು ದಿನದ ಹೊಟ್ಟೆ ತುಂಬಿಸಿಕೊಳ್ಳುತಿರುವ ಬಡ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ತೆಗೆಯುವಂತೆ ಸೂಚನೆ ನೀಡಿದ್ದಾರೆ, ಎಂದು ಮಾನವ ಹಕ್ಕುಗಳ ರಕ್ಷಣಾ ಸಮಿತಿಗೆ ಬೀದಿ ಬದಿ ವ್ಯಾಪಾರಸ್ಥರು ಮನವಿ ನೀಡಿದ್ದು , ಮಾನವ ಹಕ್ಕುಗಳ ರಕ್ಷಣಾ ಸಮಿತಿಯು ಪುರಸಭಾ ಅಧಿಕಾರಿಗಳ ನಡೆಯನ್ನು ಖಂಡಿಸಿದ್ದು, ಬೀದಿಬದಿಯ ವ್ಯಾಪಾರಸ್ಥರಿಗೆ ಪರವಾನಗಿಯನ್ನು ಪುರಸಭೆಯು ನೀಡಿದ್ದು 50 ಸಾವಿರದ ವರೆಗೆ ಸಾಲವನ್ನು ಸಹ ನೀಡಿದ್ದು ಸಾಲ ತೀರಿಸುವುದು ಹೇಗೆ ಮುಂದಿನ ಜೀವನಕ್ಕೆ ಪರಿಹಾರ ಏನು ಹಾಗಾಗಿ ಒಂದು ಶಾಶ್ವತ ಪರಿಹಾರವನ್ನು ಕಲ್ಪಿಸಿ ಕೊಡುವವರೆಗೂ ಹಾಲಿ ಇರುವ ಸ್ಥಳದಲ್ಲಿಯೇ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವಂತೆ ಸಮಿತಿಯು ಅಧಿಕಾರಿಗೊಂದಿಗೆ ಚರ್ಚಿಸಲಾಗುವುದು.

ಈ ವಿಚಾರವನ್ನು ಶಾಸಕರು ಗಂಭೀರವಾಗಿ ತೆಗೆದುಕೊಂಡು ಇದನ್ನು ತಡೆಯಲು ಮುಂದಾಗಬೇಕು ಎಂದು ಮಾನವ ಹಕ್ಕುಗಳ ರಕ್ಷಣಾ ಸಮಿತಿಯು ಒತ್ತಾಯಿಸುತ್ತಿದೆ ಎಂದ ಅವರು ಶಾಸಕರು ಮದ್ಯೆ ಪ್ರವೇಶಿಸಿ ಈ ಸಮಸ್ಯೆಯನ್ನು ಪರಿಹರಿಸದೆ ಇದ್ದಲ್ಲಿ ಪುರಸಭೆಯ ಆಡಳಿತದ ವಿರುದ್ಧ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಮಾನವ ಹಕ್ಕುಗಳ ರಕ್ಷಣಾ ಸಮಿತಿಯು ಎಚ್ಚರಿಕೆಯ ಸಂದೇಶವನ್ನು ನೀಡುತ್ತಿದೆ ಎಂದಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *