
ಸಕಲೇಶಪುರ :-ತಾಲ್ಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿಯು ಸುಮಾರು 13 ಹಳ್ಳಿಗಳನ್ನು ಹೊಂದಿದ್ದು , ವಳಲಹಳ್ಳಿಯನ್ನು ಕೇಂದ್ರವನ್ನಾಗಿಟ್ಟುಕೊಂಡು ಅಲ್ಲಿಗೆ ಪ್ರತ್ಯೇಕವಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸಿಕೊಳ್ಳಲು ಗ್ರಾಮಸ್ಥರು ಕಳೆದ 6 ತಿಂಗಳಿಂದ ಮನಮಿ ಪುತ್ರವನ್ನು ಹಿಡಿದು ತಾಲ್ಲೂಕು ಹಾಗೂ ಜಿಲ್ಲಾಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಗೆ ಅಲಿಯುತ್ತಿದ್ದರು.
ಇವರ ಶ್ರಮಕ್ಕೆ ನಿನ್ನೆ ಹಾಸನಕ್ಕೆ ಬಂದ ಜಿಲ್ಲಾ ಉಸ್ತುವಾರಿಗಳು ಹಾಗೂ ಸಹಕಾರ ಸಚಿವರು ಆದ ರಾಜಣ್ಣನವರನ್ನು ಭೇಟಿ ಮಾಡಿದ ಗ್ರಾಮಸ್ಥರು ತಮ್ಮ ಮನವಿಯನ್ನು ಸಲ್ಲಿಸಿದ್ದರು.
ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಸಿದ ಸಚಿವರು ಸ್ಥಳದಲ್ಲಿಯೇ ಸಂಬಂಧ ಪಟ್ಟ ಡಿ ಆರ್ ಎಲ್ ಗೆ ಕರೆಮಾಡಿ ವಳಲಹಳ್ಳಿ ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಕೂಡಲೆ ಸಂಘವನ್ನು ಸ್ಥಾಪನೆ ಮಾಡಲು ಅವಕಾಶ ಮಾಡಿ ಕೊಡುವಂತೆ ಹೇಳಿದರು.
ಇದರ ಫಲವಾಗಿ ಇಂದು ಸಕಲೇಶಪುರದ ಎ ಆರ್ ಎಲ್ ರವರು ನೂತನ ಸಂಘವನ್ನು ಸ್ಥಾಪಿಸಿಕೊಳ್ಳಲು ಸಂಘಕ್ಕೆ ಪೂರ್ವ ಷೇರುಗಳನ್ನು ಸಂಗ್ರಹಿಸಲು ಅನುಮತಿ ಕೊಟ್ಟರು. ಇದರಿಂದ ತಮ್ಮ ಹೋರಾಟಕ್ಕೆ ಸಿಕ್ಕ ಮೊದಲ ಜಯಕ್ಕೆ ಗ್ರಾಮಸ್ಥರು ಖುಷಿ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೆ.ಪಿ ಕೃಷ್ಣೆಗೌಡ, ಹಿರದನಹಳ್ಳಿ ಹೂವಣ್ಣ ಗೌಡ, ವಳಲಹಳ್ಳಿ ರುದ್ರೇಶ್,ಶಿರಡಿಗಡಿ ಶ್ರೀ ಚೌಡೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ಪ್ರಜ್ವಲ್ ಚಿನ್ನಹಳ್ಳಿ ,ಹೆತ್ತೂರು ಹೋಬಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ವಳಲಹಳ್ಳಿ ವಸಂತ್,ಹೆತ್ತೂರು ಹೋಬಳಿ ವಕ್ಕಲಿಗರ ಸಂಘದ ನಿರ್ದೇಶಕರಾದ ಚಿದಾನಂದ್, ಕರಡಿಗಾಲ ಗ್ರಾಮಸ್ಥರಾದ ಲಾತೇಶ್, ದರ್ಶನ್,ಪತ್ರಕರ್ತ ಕರಡಿಗಾಲ ಅರುಣ್ ಗೌಡ,ವಳಲಹಳ್ಳಿ ಮೂರ್ತಿ,ಮರ್ಜನಹಳ್ಳಿ ಪರಮೇಶ್ ಇದ್ದರು.




