ಸಕಲೇಶಪುರ : ನಾನು ಹುಟ್ಟಿ ಬೆಳೆದ ಊರಿನಲ್ಲಿ ನನ್ನ ನಟನೆಯ ಕುದ್ರು ಚಲನಚಿತ್ರವನ್ನು ನಮ್ಮ ಊರಿನ ತೇಜಸ್ವಿ ಚಿತ್ರಮಂದಿರದಲ್ಲಿ ನಮ್ಮೂರಿನ ಜನರೊಂದಿಗೆ ಉದ್ಘಾಟನೆ ಮಾಡುತ್ತಿರುವುದು ಅತ್ಯಂತ ಸಂತೋಷ ತಂದಿದೆ ಎಂದು ಕುದ್ರು ಚಲನಚಿತ್ರ ನಟಿ ಡಯಾನಾ ಡಿಸೋಜ ಹೇಳಿದ್ದಾರೆ.

ಶುಕ್ರವಾರ ರಾಜ್ಯಾದ್ಯಾಂತ ತೆರೆಕಂಡ ಕುದ್ರು ಚಲನಚಿತ್ರವನ್ನು ಇಂದು ಸಕಲೇಶಪುರ ಪಟ್ಟಣದ ತೇಜಸ್ವಿ ಚಿತ್ರಮಂದಿರಲ್ಲಿ ಜ್ಯೋತಿ ಬೆಳಗಿಸಿ ಕೇಕ್ ಕತ್ತರಿಸುವ ಮೂಲಕ ಸಿನಿಮಾ ಬಿಡುಗಡೆ ಮಾಡಿದ ಚಿತ್ರ ನಟಿ ಡಯಾನಾ ಡಿಸೋಜ ಮಾತನಾಡಿ ಪ್ರಚಾರಕ್ಕೆ ಮುಖ್ಯ ಕಾರಣ ಮಾದ್ಯಮದವರು ಮಾದ್ಯಮದವರು ಇಲ್ಲ ಅಂದರೆ ನಾವೇನೂ ಮಾಡಲು ಸಾದ್ಯವಿಲ್ಲ.

ನಾನು ನಮ್ಮ ಪೋಷಕರ ಹಾಗೂ ನಮ್ಮ ಸಕಲೇಶಪುರದ ಜನತೆಯ ಮುಂದೆ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದು ಖುಷಿ ತಂದಿದೆ, ಈ ಹಿಂದೆ ನಾನು ಎರಡು ಸಿನಿಮಾಗಳಲ್ಲಿ ನಟಿಸಿದ್ದೆ ಆಕಸ್ಮಿಕವಾಗಿ ಅದು ತೆರೆಗೆ ಬರಲಿಲ್ಲ ಇದು ನನ್ನ ಮೂರನೇ ಸಿನಿಮವಾಗಿದ್ದು ಪ್ರತಿಯೊಬ್ಬರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವ ಮೂಲಕ ನಮಗೆ ಪ್ರೋತ್ಸಾಹ ನೀಡಬೇಕು ಎಂದರು.

ಪುರಸಭೆಯ ಸದಸ್ಯರಾದ ಪ್ರಜ್ವಲ್ ಮಾತನಾಡಿ ನಮ್ಮೂರಿನ ಪ್ರತಿಭೆಯಾದ ಡಯಾನಾ ಡಿಸೋಜ ಅವರು ಸಿನಿಮಾದಲ್ಲಿ ನಟಿಸಿರುವುದು ನಮ್ಮ ಊರಗೆ ಹೆಮ್ಮೆಯ ವಿಷಯ ಸಕಲೇಶಪುರದ ಚಂದನ್ ಶೆಟ್ಟಿ, ಬ್ಯಾಕರವಳ್ಳಿ ಸಂತೋಷ್, ಹಾಗೆಯೇ ಇದೀಗ ಡಯಾನಾ ಅವರು ಕುದ್ರು ಸಿನಿಮಾದಲ್ಲಿ ನಟಿಸಿದ್ದು ಈ ಸಿನಿಮಾ ದೀರ್ಘಕಾಲದವರೆಗೆ ನಡೆದು ಯಶಸ್ಸು ಕಾಣಲಿ ಹತ್ತಾರು ಸಿನಿಮಾಗಳಲ್ಲಿ ನಟಿಸುವ ಅವಕಾಶ ಡಯಾನಾ ಅವರಿಗೆ ದೊರಕಲಿ ಎಂದು ಹಾರೈಸಿದರು.

ಗಾಯತ್ರಿ ಚಿತ್ರಮಂದಿರದ ಮಾಲೀಕ ಜೈಮಾರುತಿ ದೇವರಾಜು ಮಾತನಾಡಿ ಸಕಲೇಶಪುರದ ಸಹೋದರಿ ಡಯಾನಾ ನಟಿಸಿರುವ ಚಿತ್ರ ನೂರು ದಿನಗನ್ನು ಪೂರೈಸಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಜೈಭೀಮ್ ಮಂಜು, ಕೊಂಕಣಿ ಸಂಘದ ಅದ್ಯಕ್ಷ ಪ್ರದೀಪ್ ಡಿಸೋಜ, ಪರಿಸರ ಪ್ರೇಮಿ ಇತಿಹಾಸ್, ನಟಿ ಡಯಾನಾ ಅವರ ತಂದೆ ಥೋಮಸ್ ಡಿಸೋಜ, ತಾಯಿ ಮೋನಿಕಾ ಡಿಸೋಜ, ಪತ್ರಕರ್ತ ರವಿಕುಮಾರ್, ಕ್ರೈಸ್ತ ಮುಖಂಡ ರಾಕೇಶ್, ಇತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *