
“ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಂದ ಬೀದಿ ನಾಟಕದ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.ಸಕಲೇಶಪುರ: ಭಾರತ ಚುನಾವಣಾ ಆಯೋಗ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ತಾಲ್ಲೂಕು `ಸ್ವೀಪ್ ಸಮಿತಿ’ ಇವರ ಸಂಯುಕ್ತ ಆಶ್ರಯದಲ್ಲಿ ಸಕಲೇಶಪುರ ನಗರದ ಸಂತೆ ಮೈದಾನ, ಹೊಸ ಬಸ್ ನಿಲ್ದಾಣ ಹಾಗೂ ಹಳೇ ಬಸ್ ನಿಲ್ದಾಣದಲ್ಲಿ ಮತದಾನ ಜಾಗೃತಿ ಆಂದೋಲನ ಕಾರ್ಯಕ್ರಮದ ಅಂಗವಾಗಿ ಸಕಲೇಶಪುರ ನಗರದ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ನಿಲಯಾರ್ಥಿಗಳು “ಮತದಾನ ನಮ್ಮ ಹಕ್ಕು”ಎಂಬ ಬೀದಿ ನಾಟಕವನ್ನು ಪ್ರದರ್ಶಿಸುವ ಮೂಲಕ ಸಾರ್ವಜನಿಕರೊಂದಿಗೆ ಪ್ರತಿಜ್ಞೆಯನ್ನು ಸ್ವೀಕರಿಸಿ, ಮುಕ್ತ ಮತ್ತು ನ್ಯಾಯ ಸಮ್ಮತ – ಮತದಾನದ ಜಾಗೃತಿಯ ಅರಿವನ್ನು ಮೂಡಿಸಿದರು.ಕಾರ್ಯಕ್ರಮದಲ್ಲಿ ಪ್ರೊಬೆಷನರಿ ತಹಶೀಲ್ದಾರ್ ಆದ ಶ್ರೀಧರ್, ಚುನಾವಣಾ ಶಿರಸ್ತೇದಾರರಾದ ಶ್ರೀಮತಿ ಶ್ವೇತಾ, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಲ್ಯಾಣಾಧಿಕಾರಿಗಳಾದ ಶ್ರೀ ಎನ್.ಪಿ. ಪಟಗಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಾದ ಚಂದ್ರಶೇಖರ್ ಆರ್, ಶ್ರೀಮತಿ ಸವಿತ,, ದೊಡ್ಡಶೆಟ್ಟಿ ವಿ., ದೊಡ್ಡಶೆಟ್ಟಿ ಎಸ್.ಸಿ., ಸಂದೀಪ್ ಡಿ.ಆರ್., ಗಣೇಶ್ ವೈ.ಎಲ್., ರಘುನಾಥ್ ಕೆ.ಎಂ. ಮತ್ತು ನಿಲಯದ ವಿದ್ಯಾರ್ಥಿಗಳು ಹಾಜರಿದ್ದರು.
*ವರದಿ : ಪ್ರಧಾನ ಸಂಪಾದಕರು ಎಸ್ ಎಮ್ ಮಂಜುನಾಥ್
ಸಂಪಾದಕರು : M. B. ಉಮೇಶ್
ಸಂಕಲನಕಾರ : ಮೋಹನ್ Fcc,
ವ್ಯವಸ್ಥಾಪಕರು : ರಾಕೇಶ್. ಶೇಷಾದ್ರಿ
