
*ಮತದಾನ ಜಾಗೃತಿ ಅಭಿಯಾನ ಸಮಿತಿ ಹಾಸನ ಜಿಲ್ಲೆ* ಸಕಲೇಶಪುರ ಆಲೂರು ಕಟ್ಟಾಯ ಕ್ಷೇತ್ರ. ಹೆತ್ತೂರು ಯಸಳೂರು ಮಹಾ ಶಕ್ತಿ ಕೇಂದ್ರದ ಮಹಿಳಾ ಕಾರ್ಯಕರ್ತರ ಸಭೆ ಇಂದು ಹೆತ್ತೂರು ಒಕ್ಕಲಿಗರ ಸಮುದಾಯ ಭವನದಲ್ಲಿ ಸಮರ್ಪಕವಾಗಿ ನೆರೆವೇರಿತು.ಮುಖ್ಯ ಅತಿಥಿಗಳಾಗಿ ಶ್ರೀ ಮಹಿಪಾಲ್ ವಿಶ್ವ ಹಿಂದೂ ಪರಿಸದ್ ಹಾಸನ ವಿಭಾಗ ಕಾರ್ಯದರ್ಶಿಗಳು,ಹರೀಶ್ ಕರಡಿಗಾಲ RSS ಹಾಸನ ಜಿಲ್ಲಾ ಸಹಸಂಪರ್ಕ ಪ್ರಮುಖರು.ನವೀನ್ ಹಾಸನ್ ಜಿಲ್ಲಾ ಕಾರ್ಯವಾಹರು ಉಪಸ್ಥಿತರಿದ್ದರು. ಮಾಜಿ ಸೈನಿಕರು ಹಾಗೂ RSS ಕಾರ್ಯಕರ್ತರೂ ಆದ ಶ್ರೀ ನಂದೀಶ್ HD ರವರು ಸ್ವಾಗತ ಭಾಷಣ ಮಾಡಿದರು ನಂತರ ಹೆತ್ತೂರಿನ ಶ್ರೀಮತಿ ನೇತ್ರಾಸುರೇಶ ಅವರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೆ ಸಮಯದಲ್ಲಿ ಶ್ರೀ ನವೀನ್ ರವರು ಮತದಾನ ಜಾಗೃತಿಯ ಬಗ್ಗೆ ಮಾತನಾಡಿ ಧರ್ಮದ ಹಾದಿಯಲ್ಲಿ ಚುನಾವಣೆ ನಡೆಯಬೇಕು, ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಮಹಿಳೆಯರ ಪಾತ್ರ ಅತಿ ಮುಖ್ಯ ಎಂದು ಹೇಳಿದರು. ನಂತರ ಮಹಿಪಾಲ್ ರವರು ಮಾತನಾಡಿ ರಾಷ್ಟ್ರೀಯತೆಯ ಬಗ್ಗೆ ಅರಿವು ಮೂಡಿಸಿ ದೇಶದ ಏಳಿಗೆ ಮತ್ತು ಸಮಾಜದ ಏಳಿಗೆಗೆ ಶ್ರಮಿಸುವ ಹಾಗೂ ಎಲ್ಲರನ್ನು ಒಂದಾಗಿ ಕರೆದುಕೊಂಡು ಹೋಗುವ ವಸುದೇವ ಕುಟುಂಬಕಮ್ ನೀತಿಯನ್ನು ಪಾಲಿಸುವ ಹಾಗೂ ಸರ್ವ ಜನೋ ಸುಖಿನೋ ಭವಂತು ಎಂಬ ನೀತಿಮಂತ್ರಉಳ್ಳ ಪಕ್ಷಕ್ಕೆ ಬೆಂಬಲ ಸೂಚಿಸಿ ಎಂಬ ಅರಿವು ಮೂಡಿಸಿದರು. ಇದೆ ಸಮಯದಲ್ಲಿ ಮಾತನಾಡಿದ ನಂದೀಶ್ ರವರು ಮಹಿಳೆಯರ ಶಕ್ತಿಯ ಕುರಿತು ಮನವರಿಕೆ ಮಾಡಿಕೊಟ್ಟರು ಹಾಗೂ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಊರೊಂದು ಕಲಿತಂತೆ ಎಂಬ ನುಡಿಗಟ್ಟನ್ನು ಉಚ್ಚರಿಸಿ ಮಹಿಳಾ ಜಾಗೃತಿಯ ಮಹತ್ವ ತಿಳಿಸಿದರು. ನಂತರ ಮಾತನಾಡಿದ ಅವರೇಕಾಡ್ ಪೃಥ್ವಿಯವರು ನಮ್ಮ ಕೇಂದ್ರ ಸರ್ಕಾರವು ಸಾಮಾನ್ಯ ಕುಟುಂಬದ ಏಳಿಗೆಗಾಗಿ ಹಾಗೂ ಮಹಿಳೆಯರ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗಾಗಿ ಕೇಂದ್ರಸರ್ಕಾರ ಹಮ್ಮಿಕೊಂಡ ಕಾರ್ಯಕ್ರಮಗಳು ಹಾಗೂ 100 ಪ್ರತಿಸತ ಮತದಾನ ಮಾಡಬೇಕಾಗಿ ವಿನಂತಿಯನ್ನು ಮಾಡಿಕೊಂಡರು. ಸಮಾರಂಭದಲ್ಲಿ ಅಂತ್ಯದಲ್ಲಿ ಮಾತನಾಡಿದ ಕರಡಿಗಾಲ ಹರೀಶ್ ರವರು ಎಲ್ಲಾ ಮಹಿಳೆಯರು ಜವಾಬ್ದಾರಿಯನ್ನು ವಹಿಸಿಕೊಂಡು 100 ಪ್ರತಿಶತ ಮಾತದಾನ ಮಾಡಿಸಬೇಕೆಂದು ಕೇಳಿಕೊಂಡರು ಹಾಗೂ ಮತದಾನದ ಅರಿವನ್ನು ಸಹ ತಿಳಿಸಿಕೊಟ್ಟರು ಮತ್ತು ಬಂದಂತಹ ಎಲ್ಲಾ ತಾಯಂದಿರು ಹಾಗೂ ಸಂಘ ಕಾರ್ಯಕರ್ತರಿಗೂ ವಂದನೆಗಳನ್ನು ತಿಳಿಸುವುದರ ಮೂಲಕ ಕಾರ್ಯಕ್ರಮವನ್ನು ಮುಗಿಸಲಾಯಿತು. ಇದೆ ಸಮಯದಲ್ಲಿ , ಕಮಲಾಕ್ಷಿ ಹೆತ್ತೂರು, ರೇಷ್ಮಾರಾಮಚಂದ್ರ ನಾಗೇಶ್ ಕುಸುಮಾವತಿ ಕೂಡುರಸ್ತೆ ಮತ್ತು ಕಾರ್ಯಕರ್ತರೂ ಹಾಜರಿದ್ದರು.
ವರದಿ : ಪ್ರಧಾನ ಸಂಪಾದಕರು ಎಸ್ ಎಮ್ ಮಂಜುನಾಥ್
ಸಂಪಾದಕರು : M. B. ಉಮೇಶ್
ಸಂಕಲನಕಾರ : ಮೋಹನ್ Fcc,
ವ್ಯವಸ್ಥಾಪಕರು : ರಾಕೇಶ್. ಶೇಷಾದ್ರಿ
