ಆಲೂರು :-ತಾಲ್ಲೂಕಿನ ಮರಸು ಹೊಸಳ್ಳಿ ಗ್ರಾಮದ ಸ.ಕಿ ಪ್ರಾ. ಶಾಲೆಯಲ್ಲಿ ನಡೆದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಗುರುವಾರ ನಡೆಯಿತು.

ಕಾರ್ಯಕ್ರಮದಲ್ಲಿ ಪೃಥ್ವಿ ಜಯರಾಮ್ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತಾನಾಡಿ ಯಾವುದೇ ಪ್ರತಿಫಲಾಪೇಕ್ಷೆಯನ್ನು ಬಯಸದೇ ಸಮಾಜದ ಏಳಿಗೆಗಾಗಿ ದೇಶದ ಯುವಕರನ್ನು ಒಗ್ಗೂಡಿಸಿಕೊಂಡು ರಾಷ್ಟ್ರ ನಿರ್ಮಾಣ ಮಾಡುವ ಧ್ಯೇಯೋದ್ದೇಶದೊಂದಿಗೆ ಕಟ್ಟಿದ ಯೋಜನೆಯೇ ರಾ.ಸೇ.ಯೋ. ಆದುದರಿಂದ ಸಮಯ ಪರಿಪಾಲನೆ, ಶಿಸ್ತು ಮತ್ತು ಸೇವಾ ಮನೋಭಾವನೆ ಈ ಮೂರು ಅಂಶಗಳನ್ನು ತನ್ನಲ್ಲಿ ಮೈಗೂಡಿಸಿಕೊಂಡು ಯುವಶಕ್ತಿಯು ಮುನ್ನಡೆಯುತ್ತದೆ ಹಾಗೂ ಈ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಬೇಕು.

ಸಮಾಜ ಪರಿವರ್ತನೆಯಲ್ಲಿ ಶಿಬಿರಾರ್ಥಿಗಳ ಪಾತ್ರ ಅತಿ ಮುಖ್ಯವಾದುದು, ಅಂತೆಯೇ ಯಾವುದೇ ಶಿಕ್ಷಣ ಸಂಸ್ಥೆಗಳು ಸಫಲತೆಯನ್ನು ಕಂಡುಕೊಳ್ಳಬೇಕಾದಲ್ಲಿ ಇಂತಹ ಗುರುತರವಾದ ಸಮಾಜಸೇವೆಗಳನ್ನು ಮಾಡುವತ್ತ ಕಾಲೇಜು ಯುವಕರು ರಾ.ಸೇ.ಯೋ ಮೂಲಕ ಹೆಜ್ಜೆಯಿಟ್ಟು ಸಲ್ಲಿಸಿದ ಸೇವೆಯು ಶ್ಲಾಘನೀಯ, ಸ್ವಾಮಿ ವಿವೇಕಾನಂದರ ಆದರ್ಶದಂತೆ ಸೇವೆ, ತ್ಯಾಗ ಹಾಗೂ ತಾಳ್ಮೆ ಇದನ್ನು ಮುಂದಿಟ್ಟುಕೊಂಡು ವಿವೇಕಾನಂದ ವಿದ್ಯಾವರ್ಧಕ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.

ಅಂತೆಯೇ ನಮ್ಮ ವಿದ್ಯಾರ್ಥಿಗಳು ಮಾಡಿದ ಸೇವೆಯಿಂದ ವಿವೇಕಾನಂದರ ಆದರ್ಶಗಳು ಸಾಕಾರಗೊಳ್ಳುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸುತ್ತಾ ಕಾಲೇಜು ಸಿಬ್ಬಂದಿಗಳಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಅಭಿನಂದನೆ ಸಲ್ಲಿಸಿದರು .

ನಂತರ ಇರ್ಫಾನ್ ಪಾಷಾ ಮಾತಾನಾಡಿ ಕಾಲೇಜುಗಳಲ್ಲಿ ನಡೆಯುವ ಏಕದಿನ ಎನ್ ಎಸ್ ಎಸ್ ಶಿಬಿರಗಳಲ್ಲಿ ಭಾಗವಹಿಸಿದಲ್ಲಿ ವಿದ್ಯಾರ್ಥಿಗಳಿಗೆ ಸೇವೆಯ ಅನುಭವ ದೊರಕುತ್ತದೆ ವಾರ್ಷಿಕ ಶಿಬಿರಗಳು ಶಿಬಿರಾರ್ಥಿಗಳ ಸರ್ವೋತೋಮುಖ ಬೆಳವಣಿಗೆಗೆ ಕಾರಣವಾಗುತ್ತವೆ, ಏಳು ದಿನಗಳ ಸಹಬಾಳ್ವೆ ವಿದ್ಯಾರ್ಥಿಗಳಿಗೆ ಮುಂದೆ ಯಾವುದೇ ಪರಿಸರದಲ್ಲೂ ಜೀವನ ನಡೆಸಲು ಸಹಕಾರಿಯಾಗುತ್ತದೆ, ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವಗುಣ ಆತ್ಮವಿಶ್ವಾಸ ಹೆಚ್ಚಿಸಿ ಸಭಾಕಂಪನವನ್ನು ಹೋಗಲಾಡಿಸುತ್ತದೆ,

ಸಮುದಾಯದ ಸೇವೆಯ ಮೂಲಕ ಶಿಬಿರಾರ್ಥಿಗಳ ವ್ಯಕ್ತಿತ್ವವದಲ್ಲಿ ಮಹತ್ತರ ಬದಲಾವಣೆಗಳನ್ನು ತರಬಲ್ಲ ಶಕ್ತಿ ಎನ್ ಎಸ್ ಎಸ್ ಗೆ ಇದೇ ಪರಿಸರ ಪ್ರಜ್ಞೆ ದೇಶಪ್ರೇಮ ಸೇವಾ ಮನೋಭಾವವುಳ್ಳ ವ್ಯಕ್ತಿಯಾದಲ್ಲಿ ಅದುವೇ ದೇಶಕ್ಕೆ ನೀಡುವ ಉತ್ತಮ ಕೊಡುಗೆಯಾಗಿದೆ ಹಾಗಾಗಿ ಈ ಗ್ರಾಮದಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ಮರಸು ಹೊಸಳ್ಳಿ ಗ್ರಾಮದ ಜನರಿಗೆ ಅವಕಾಶ ಕಲ್ಪಿಸಿಕೊಟ್ಟದ್ದಕ್ಕಾಗಿ ಧನ್ಯವಾದವನ್ನರ್ಪಿಸಿ ಇದೇ ರೀತಿಯ ಉತ್ತಮ ಕಾರ್ಯಕ್ರಮಗಳು ಮೂಡಿ ಬರಲಿ ಎಂದು ಆಶಿಸಿದರು.

ಎನ್ ಎಸ್ ಎಸ್ ವಿದ್ಯಾರ್ಥಿ ನಿವೇದಿತಾ ಮಾತಾನಾಡಿ ಕಳೆದ ಏಳು ದಿನಗಳಿಂದ ನಡೆದ ಎನ್ ಎಸ್ ಎಸ್ ಕಾರ್ಯಕ್ರಮ ನಮಗೆ ಒಳ್ಳೆಯ ಅನುಭವವನ್ನು ನೀಡಿದೆ ಅಲ್ಲದೆ ಊರಿನವರು ನಮಗೆ ಎಲ್ಲಾರೀತಿಯಲ್ಲೂ ಸಹಕರಿಸಿ ನೀಡಿ ನಮಗೆ ಕೆಲಸ ಮಾಡಲು ಹೆಚ್ಚಿನ ಸಹಕಾರಿಮಾಡಿದರು ಎಂದು ಗ್ರಾಮಸ್ಥರಿಗೆ ಹಾಗೂ ಶಾಲಾ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿ ನೋವಿನಿಂದ ಕಣ್ಣೀರುಹಿಡುತ್ತಾ ತಮ್ಮ ಸಿಹಿ ಕಹಿ ಅನುಭವಗಳನ್ನು ಹಂಚಿಕೊಂಡರು.ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *