
ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಮತ್ತು ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ತಮ್ಮ RAWEP ಗ್ರಾಮದಲ್ಲಿ ಎರಡನೆ ದಿನದ ಅಂಗವಾಗಿ ” ಕನಸಿನ ಗ್ರಾಮ ಸ್ವಚ್ಛಗ್ರಾಮ” ಎಂಬ ಘೋಷಣೆಯಡಿ “ಸ್ವಚ್ಛತೆಯ ಪ್ರಾಮುಖ್ಯತೆಯನ್ನು ಸಾರುತ್ತ ಹಳ್ಳಿಯ ಕೇಂದ್ರ ಬಿಂದುಗಳಾದ ದೇವಸ್ಥಾನದ ಆವರಣ, ಅಂಗನವಾಡಿ,ಹಾಲಿನ ಡೈರಿ , ಬೆಳೆ ವಸ್ತು ಸಂಗ್ರಹಾಲಯ ಸಿದ್ಧಪಡಿಸುವ ಜಾಗ ಹಾಗು ಹಳ್ಳಿಯ ಸುತ್ತಮುತ್ತಲಿನ ಜಾಗಗಳನ್ನು ಸ್ವಚ್ಛ ಗೊಳಿಸಿದರು.
ಇದರ ಜೊತೆಜೊತೆಗೆ ಶುಚಿತ್ವದ ಮಹತ್ವ ಹಾಗು ಅದರಿಂದ ಆಗುವ ಅನುಕೂಲಗಳ ಬಗ್ಗೆ ಅರಿವು ಮೂಡಿಸಿ ನಮ್ಮ ಗ್ರಾಮ ಸ್ವಚ್ಛತೆಗೆ ಒಂದು ಮಾದರಿ ಗ್ರಾಮವಾಗಿ ಉಳಿಯಬೇಕೆಂದು ಮಾರ್ಗ ದರ್ಶಿಸಿದರು.
ಇದಕ್ಕೆ ಗ್ರಾಮದ ಜನರು ಆಸಕ್ತಿ ವ್ಯಕ್ತಪಡಿಸಿ ಅವರು ಸಹ ಸ್ವಚ್ಛತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಸಹ ಪ್ರಾಧ್ಯಾಪಕರಾದ ಡಾ. ಶಶಿಕಿರಣ್, ಡಾ.ನವೀನ್ ಕುಮಾರ್, ಹಾಗು ಡಾ. ಸದಾಶಿವನ ಗೌಡ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.

