
ಚನ್ನರಾಯಪಟ್ಟಣ :- ಪ್ರೋ.ಭಗವಾನ್ ಗಡಿಪಾರಿಗೆ ಆಗ್ರಹಿಸಿ ಪಟ್ಟಣದಲ್ಲಿ ಒಕ್ಕಲಿಗ ಸಮುದಾಯದಿಂದ ಪ್ರತಿಭಟನೆ ನಡೆಯಿತು,
ಚನ್ನರಾಯಪಟ್ಟಣದ ಕೆ ಆರ್ ಸರ್ಕಲ್ ನಲ್ಲಿ ಜಮಾಯಿಸಿದ ಸಾರ್ವಜನಿಕರು ಮೆರವಣಿಗೆ ಹೊರಟು ನವೋದಯ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಭಗವಾನ್ ಅವರಿಗೆ ಧಿಕ್ಕಾರ ಕೋಗಿ, ಪ್ರೊಫೆಸರ್ ಭಗವಾನ್ ಅವರ ಪ್ರಕೃತಿಯನ್ನು ದಹಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಳೆನಹಳ್ಳಿ ಆನಂದ್ ಯಾವುದೇ ವ್ಯಕ್ತಿಯಾಗಲಿ ಒಂದು ಸಮಾಜವನ್ನು ಗುರಿಯಾಗಿಟ್ಟುಕೊಂಡು ಮಾತನಾಡಬಾರದು, ಕನ್ನಡ ನಾಡು ಸರ್ವ ಜನಾಂಗದ ಬೀಡಾಗಿದೆ, ಇಂಥ ಶಾಂತಿಯ ಬೀಡಿನಲ್ಲಿ ಅಶಾಂತಿ ಉಂಟು ಮಾಡುವ ಹೇಳಿಕೆಯನ್ನು ನೀಡಬಾರದು, ಒಂದು ಸಮಾಜಕ್ಕೆ ನೋವಾಗುವಂತಹ ಹೇಳಿಕೆ ನೀಡಿರುವುದು ಸರಿಯಲ್ಲ , ಪ್ರೊಫೆಸರ್ ಭಗವಾನ್ ಗೆ ತಲೆಕೆಟ್ಟು ಈ ರೀತಿ ಹೇಳಿಕೆ ನೀಡಿರುವುದು ಒಕ್ಕಲಿಗ ಸಮಾಜಕ್ಕೆ ಮಾಡಿದ ಅಪಮಾನವಾಗಿದೆ, ಕೂಡಲೇ ಈ ವ್ಯಕ್ತಿಯನ್ನು ಬಂಧನ ಮಾಡಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಆಗಮಿಸಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಅಶೋಕ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಲೋಕೇಶ್ ಕೆಂಪೇಗೌಡ ವೇದಿಕೆ ಸಂಸ್ಥಾಪಕರಾದ ಆನಂದ್ ಕಾಳೆನಹಳ್ಳಿ, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷರಾದ ಜೈಪಾಲ್, ಉಪಾಧ್ಯಕ್ಷರಾದ ಶಿವಣ್ಣ, ಕಾರ್ಯದರ್ಶಿ ರವಿ, ರೈತ ಸಂಘಟನೆ ಮುಖಂಡರಾದ ಅರಳಾಪುರ ಮಂಜಣ್ಣ, ಮೀಸೆ ಮಂಜಣ್ಣ, ಸಿ ಜಿ ರವಿ, ನಾಗರತ್ನ, ಪ್ರೇಮಮ್ಮ ಸೇರಿದಂತೆ ಇತರರು ಹಾಜರಿದ್ದರು.
