ವರದಿ ಪ್ರದೀಪ್

ಆಲೂರು ನಗರ ಸ್ವಚ್ಛ, ಸುಂದರ ಹಾಗೂ ಸ್ಮಾರ್ಟ್‌ ಸಿಟಿ ಕನಸು ಕಾಣುತ್ತಿರುವ ಅಧಿಕಾರಿಗಳು ಪಟ್ಟಣದಲ್ಲಿ ಕಸ ವಿಲೇವಾರಿ ಮಾಡುವುದನ್ನು ಮರೆತಂತೆ ಕಾಣುತ್ತಿದೆ. ಪರಿಣಾಮ ಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿಯಾಗದೆ ರಸ್ತೆಯುದ್ದಕ್ಕೂ ಕಸದ ರಾಶಿ ರಾರಾಜಿಸುತ್ತಿದೆ.

ಆಲೂರು ಕೊನೆಪೇಟೆ ಬಿಕ್ಕೋಡ್ ಮುಖ್ಯರಸ್ತೆಯ ಬಳಿ ಜನರು ರಾಶಿ ರಾಶಿ ಕಸ ಪ್ಲಾಸ್ಟಿಕ್‌ ಹಾಗೂ ಗೋಣಿ ಚೀಲದಲ್ಲಿ ಕಸ ತಂದು ಹಾಕುತ್ತಿದ್ದು ಸಮಸ್ಯೆ ತಲೆದೋರಿದೆ.ಮುಖ್ಯ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್‌ ಮತ್ತು ಗೋಣಿ ಚೀಲಗಳಲ್ಲಿ ತುಂಬಿದ ಕಸಗಳು ಹಾಗೂ ಕೊಳೆತು ಎಸೆದ ತರಕಾರಿಗಳು ಕೊಳೆತು ನಾರುತ್ತಿದ್ದು ನಾಯಿಗಳು ,ರಸ್ತೆಗೆ ಎಳೆದು ತಂದು ತಿನ್ನುತ್ತಿವೆ.

ಪರಿಸರವಿಡೀ ದುರ್ವಾಸನೆಯಿಂದ ಕೂಡಿದ್ದು ಸಾರ್ವಜನಿಕರು ಮೂಗು ಮುಚ್ಚಿ ಓಡಾಡುವಂತಾಗಿದೆ. ಕಸ ತ್ಯಾಜ್ಯ ಒಟ್ಟಾಗಿ ಕೊಳೆತು ದುರ್ನಾತ ಬೀರುತ್ತಿದ್ದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.

ಪಟ್ಟಣ ವ್ಯಾಪ್ತಿಯಲ್ಲಿ ಪ್ರತಿ ಬಡಾವಣೆಯಲ್ಲಿ ಮನೆಮನೆಗೆ ಹೋಗಿ ಕಸ ಸಂಗ್ರಹಿಸುವ ವಾಹನ ವ್ಯವಸ್ಥೆಯಿದ್ದರೂ ನಾಗರಿಕರು ಮಾತ್ರ ರಸ್ತೆ ಬದಿಯಲ್ಲಿ ಕಸ,ತ್ಯಾಜ್ಯ ಸುರಿಯುತ್ತಿರುವುದು ಬೇಸರದ ಸಂಗತಿ.

ಪ್ರಧಾನ ಮಂತ್ರಿಯವರ ಸ್ವಚ್ಚ ಭಾರತ -ಸ್ವಸ್ಥ ಭಾರತ ಪರಿಕಲ್ಪನೆಯಲ್ಲಿ ಸ್ವತ್ಛತೆಗೆ ಆದ್ಯತೆ ನೀಡದೆ ರಸ್ತೆ ಬದಿ ಕಸ ಹಾಕಬಾರದೆಂಬ ಮನವಿಗೆ ಕಿವಿಗೊಡದ ಪ್ರಜ್ಞಾವಂತ ಸುಶಿಕ್ಷಿತ ನಾಗರಿಕರು ಕಸ ಎಸೆಯುತ್ತಿದ್ದಾರೆ.

ಸ್ವಚ್ಚತೆಯನ್ನು ಕಾಪಾಡುವಲ್ಲಿ ಸಾರ್ವಜನಿಕರ, ಗ್ರಾಮಸ್ಥರ ಸಹಕಾರ ಅತೀ ಅಗತ್ಯವಾಗಿದೆ.

ತ್ಯಾಜ್ಯ ವಿಲೇವಾರಿ ಲೋಪ; ರಸ್ತೆ ಬದಿಯಲ್ಲೇ ಕಸದ ರಾಶಿಪ್ರತೀ ವರ್ಷ ಪಟ್ಟಣ ಪಂಚಾಯಿತಿ ಕಸ ವಿಲೇವಾರಿಗಾಗಿ ಲಕ್ಷ ಗಟ್ಟಲೆ ಹಣ ವ್ಯಯ ಮಾಡಲಾಗುತ್ತಿದೆ ಎನ್ನುವ ಅಧಿಕಾರಿಗಳು ಬಿಡುಗಡೆಯಾದ ಅನುದಾನ ಸರಿಯಾಗಿ ಬಳಕೆಯಾಗುತ್ತಿದೆಯೇ ಎಂಬ ಬಗ್ಗೆ ಗಮನಹರಿಸುತ್ತಿಲ್ಲ.

ಅಧಿಕಾರಿಗಳ ಕರ್ತವ್ಯ ಲೋಪದಿಂದ ದಿನೇ ದಿನೆ ಕಸದ ಸಮಸ್ಯೆ ದ್ವಿಗುಣಗೊಳ್ಳುತ್ತಿದೆ. ಪರಿಣಾಮ ಸ್ಮಾರ್ಟ್‌ ಸಿಟಿಯ ಕನಸು ಇನ್ನೂ ಕಗ್ಗಂಟಾಗುತ್ತಿದೆ.

ಈ ಬಗ್ಗೆ ಮೇಲಧಿಕಾರಿಗಳು ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.ಜನರ ಆರೋಗ್ಯಕ್ಕಿಲ್ಲ ರಕ್ಷ ಣೆ: ಪಟ್ಟಣದ ನಾನಾ ಬಡಾವಣೆಗಳಲ್ಲಿ, ರಸ್ತೆ ಬದಿಗಳಲ್ಲಿ ಖಾಲಿ ಇರುವ ಜಾಗಗಳು ಕಸ ಹಾಕುವ ತಾಣಗಳಾಗಿ ಮಾರ್ಪಟ್ಟಿವೆ. ಅಲ್ಲದೇ ಅನೇಕ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತಿವೆ. ಕಸ ಹಾಕುವುದರಿಂದ ಅದು ಅಲ್ಲೇ ಕೊಳೆತು ದುರ್ವಾಸನೆ ಉಂಟಾಗುತ್ತಿದೆ.

ಇದರಿಂದ ಅಕ್ಕಪಕ್ಕದ ನಿವಾಸಿಗಳ ಆರೋಗ್ಯದ ಮೇಲೆ ವಿಪರೀತ ಪರಿಣಾಮ ಬೀರುತ್ತಿದೆ. ಅಲ್ಲದೇ ರಸ್ತೆ ಬದಿಯಲ್ಲೇ ಕಸ ಹಾಕುತ್ತಿರುವುದರಿಂದ ತ್ಯಾಜ್ಯವೆಲ್ಲ ರಸ್ತೆಗೆ ಬರುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪ.

ಪಟ್ಟಣ ಅಧಿಕಾರಿಗಳು ಶೀಘ್ರ ಎಚ್ಚೆತ್ತುಕೊಂಡು ಕಸ ವಿಲೇವಾರಿ ನಿರ್ವಹಣೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಆ ಮೂಲಕ ಪಟ್ಟಣದ ಸ್ವಚ್ಛತೆ, ಸೌಂದರ್ಯ ಕಾಪಾಡುವ ಮೂಲಕ ಪಟ್ಟಣದಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಆದ್ಯತೆ ನೀಡಬೇಕಿದೆ.ಜನತೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದೆ ಪಾಲಿಕೆಯಿಂದ ನಿಯೋಜಿಸಿರುವ ಆಟೋ ಟಿಪ್ಪರ್‌ಗಳಿಗೆ ಹಾಕಬೇಕು. ಆ ಮೂಲಕ ನಗರವನ್ನು ಸ್ವಚ್ಛ, ಸುಂದರ ಹಾಗೂ ಉತ್ತಮ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಲು ನಾಗರಿಕರು ಕೈ ಜೋಡಿಸಬೇಕು.

ರಸ್ತೆ ಬದಿಯಲ್ಲಿ ಸ್ವಲ್ಪ ಖಾಲಿ ಪ್ರದೇಶ ಇದ್ದರೆ ಸಾಕು ಸಾರ್ವಜನಿಕರು ಕಸ ಸುರಿಯುತ್ತಿದ್ದಾರೆ. ಜತೆಗೆ ಪ್ಲಾಸ್ಟಿಕ್‌ ಕವರ್‌, ಕಸವನ್ನು ಸುರಿಯುತ್ತಿದ್ದಾರೆ. ಇದರಿಂದ ಪಟ್ಟಣದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತಿದೆ.

ಪಟ್ಟಣ ಪಂಚಾಯಿತಿ ನಿಯೋಜಿಸಿರುವ ಆಟೋ ಟಿಪ್ಪರ್‌ಗಳು ಪ್ರತಿನಿತ್ಯ ಸಮರ್ಪಕವಾಗಿ ಕಸ ನಿರ್ವಹಣೆ ಮಾಡುತ್ತಿದೆ ಆದರೂ . ನಗರದ ಪಟ್ಟಣದ ರಸ್ತೆಗಳ ಅಕ್ಕಪಕ್ಕದಲ್ಲೇ ಇಷ್ಟೊಂದು ಕಸ ಹೇಗೆ ಬರುತ್ತಿದೆ ಎಂಬುದು ಸಾರ್ವಜನಿಕರ ವಾದ ಹಾಗೂ ರಾಶಿ ರಾಶಿ ಕಸವನ್ನು ಇಲ್ಲಿ ಯಾರುತಂದು ಸುರಿಯುತ್ತಾರೆ ಎಂಬುದು ನಾಗರೀಕರ ಪ್ರಶ್ನೆ..?

ಇನ್ನೂ ಪಟ್ಟಣ ಪಂಚಾಯಿತಿ ಅಧಿಕಾರಿಗಳನ್ನು ಕೇಳಿದರೆ ಅಲ್ಲಿರುವ ಜಾಗ ನಮಗೆ ಸೇರುವುದಿಲ್ಲ ಮಾನವೀಯತೆ ದೃಷ್ಟಿಯಿಂದ ನಾವು ಕಸವನ್ನು ವಿಲೇವಾರಿ ಮಾಡಿಸಿ ಕೊಡುತ್ತೇವೆ ಎನ್ನುತ್ತಾರೆ,ಪಟ್ಟಣ ಪಂಚಾಯಿತಿ ಅಧಿಕಾರಿಗಳು ಅಲ್ಲದೆ ಆಟೋ ಟಿಪ್ಪರ್ ಗಳಲ್ಲಿ ಧ್ವನಿ ವರ್ಧಕ ಮೂಲಕ ಜನರಿಗೆ ಎಷ್ಟೇ ಮಾಹಿತಿ ನೀಡಿದರು ಯಾವುದೇ ಪ್ರಯೋಜನವಾಗುತ್ತಿಲ್ಲ ಕಸವನ್ನು ಮಾತ್ರ ರಸ್ತೆಯಲ್ಲಿಯೇ ಸುರಿಯುತ್ತಿದ್ದಾರೆಸ್ವಚ್ಛತೆಯೇ ಜೀವನ ಮಾಲಿನ್ಯವೆ ಮರಣಕೊಳಕು ಇದ್ದಲ್ಲಿ ನರಕ ಸ್ವಚ್ಛತೆ ಇದ್ದಲ್ಲಿ ಸ್ವರ್ಗಎಂಬ ಮಾತುಗಳು ಕೇಳುವುದಕ್ಕೆ ಮಾತ್ರ ಚಂದ ಅದನ್ನು ಕಾರ್ಯರೂಪಕ್ಕೆ ರೂಡಿಸುಕೊಳ್ಳುವುದು ಹಗಲು ಗನಸು ಏನೇಸುತ್ತಿದೆ.

ಮುಂದಾದರು ಕಸವನ್ನು ರಸ್ತೆ ಬದಿ ಬಿಸಾಡದೆ ಆಟೋ ಟಿಪ್ಪರ್‌ಗಳಿಗೆ ನೀಡಿ ಸ್ವಚ್ಚತೆಯನ್ನು ಕಾಪಾಡಲಿ ಎಂಬುದು ನಮ್ಮೆಲ್ಲರ ಆಶಯ ಹಾಗೂ ಸಾರ್ವಜನಿಕರ ಆರೋಗ್ಯದ ಹಿತಾ ದೃಷ್ಟಿಯಿಂದ ಕೊಡಲೇ ಕಸವನ್ನು ವಿಲೇವಾರಿ ಮಾಡಬೇಕೆಂದು ಸಾರ್ವಜನಿಕರ ಒತ್ತಾಯ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *