ಹಾಸನ :- ನಗರದ ಹೇಮಾವತಿ ಪ್ರತಿಮೆ ಬಳಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಪಂಚಾಯಿತಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ನನ್ನ ಮಣ್ಣು ನನ್ನ ದೇಶ ಅಮೃತ ಕಳಶ ಯಾತ್ರೆಯ ಜಾಥಕ್ಕೆ ನೆಹರು ಯುವ ಕೇಂದ್ರದ ಅಭಿಷೇಕ್ ಮತ್ತು ತಾಲೂಕು ಪಂಚಾಯತ್ ಸಿಒ ಗಿರೀಶ್ ಚಾಲನೆ ನೀಡಿದರು.

ನಂತರ ಉದ್ದೇಶಿಸಿ ಮಾತನಾಡಿ, ಸ್ವಾತಂತ್ರ ಬಂದು ಅಮೃತಮಹೋತ್ಸವದ ಪ್ರಯುಕ್ತ ನನ್ನ ಮಣ್ಣು ನನ್ನ ದೇಶ ಎನ್ನುವ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ದೇಶದಲ್ಲಿರುವ ಎಲ್ಲಾ ಗ್ರಾಮ ಪಂಚಾಯಿತಿಗಳಿಂದ ಮಣ್ಣನ್ನು ಸಂಗ್ರಹಿಸಿ ದೆಹಲಿ ಕೊಂಡೊಯ್ದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಸ್ಮರಣಾರ್ಥವಾಗಿ ರಾಷ್ಟ್ರೀಯ ಯುದ್ಧ ಯುದ್ಧ ಸ್ಮಾರಕ ಭವನದ ಹತ್ತಿರ ಉದ್ಯಾನವನವನ್ನು ಮಾಡಲಾಗುತ್ತಿದ್ದು, ಈ ಕಟ್ಟಡಕ್ಕೆ ದೇಶದ ಎಲ್ಲಾ ಭಾಗಗಳಿಂದ ಮಣ್ಣನ್ನು ತಂದು ನಿರ್ಮಿಸಲಾಗುವುದು ಎಂದರು. ಸೈನಿಕರ ಸ್ಮರಿಸಲು ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಈ ಅಮೃತ ಕಳಾಸವನು ಡೆಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿದೆ. ದೇಶದ ಪ್ರಧಾನಿಯವರ ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹೇಳಿದರು.

ಜಾಥದಲ್ಲಿ ವಿವಿಧ ಸ್ತ್ರೀಶಕ್ತಿ ಕೇಂದ್ರದ ಮಹಿಳೆಯರು ಹಾಗೂ ಅಂಚೆ ನೌಕರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *