
ಸಕಲೇಶಪುರ :-2023-24 ನೇ ಸಾಲಿನ ಮೊದಲನೇ ಹಂತದ ಕುರುಭತ್ತೂರು ಗ್ರಾಮಪಂಚಾಯಿತಿಯ ಗ್ರಾಮ ಸಭೆಯನ್ನು 20-10-2023 ರ ಶುಕ್ರವಾರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಮಂಜುನಾಥ ಎನ್ ರವರ ಅಧ್ಯಕ್ಷತೆಯಲ್ಲಿ ನೆಡೆಸಲಾಯಿತು.
ಗ್ರಾಮ ಸಭೆಗೆ ನೋಡಲ್ ಅಧಿಕಾರಿಯಾಗಿ ಆಗಮಿಸಿದ್ದ ಸಕಲೇಶಪುರ ತಾಲ್ಲೂಕು ಪಶುಸಂಗೋಪನ ಇಲಾಖೆ ಸಹಾಯಕ ನಿರ್ದೇಶಕರಾದ ಡಾಕ್ಟರ್ ವೆಂಕಟೇಶ್ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಧರ್ಮಪ್ಪ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು ಸೇರಿ ಜ್ಯೋತಿ ಬೆಳಗಿಸುವ ಮೂಲಕ ಗ್ರಾಮ ಸಭೆಗೆ ಚಾಲನೆ ನೀಡಿದರು.
ಗ್ರಾಮ ಸಭೆಗೆ ಆಗಮಿಸಿದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆ ಕೆಲವು ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಭಾಗವಹಿಸಿ ಮಾಹಿತಿ ನೀಡಿದರು, ಅದರೆ ಕೇವಲ 10 ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳು ಭಾಗವಹಿಸಿದರು ಇನ್ನೂ ಪಿ ಡಬ್ಲ್ಯೂ ಹಾಗೂ ರೆವೆನ್ಯೂ ಇಲಾಖೆ ಸೇರಿದಂತೆ 20ಕ್ಕೂ ಹೆಚ್ಚು ಇಲಾಖೆ ಅಧಿಕಾರಿಗಳು ಹಾಜರಾಗದೆ ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಗೂ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.
ಹೆತ್ತೂರು ಹೋಬಳಿ ಕೃಷಿ ಅಧಿಕಾರಿ ಕೇಶವ್ ಮೂರ್ತಿ ಮಾತನಾಡಿ ನನ್ನ ಬೆಳೆ ನನ್ನ ಹಕ್ಕು ಎಂಬ ಸರ್ಕಾರದ ಯೋಜನೆಯಲ್ಲಿ ರೈತರು ಬೆಳೆದ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆ ಕೊಡುವ ಕೆಲಸ ಮಾಡುತ್ತಿದ್ದೆ.ಅಲ್ಲದೆ ನಮ್ಮ ಕೃಷಿ ಇಲಾಖೆಯಿಂದ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳು ಸಿಗುತ್ತಿದ್ದು ರೈತರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು.
ಎಲ್ಲರೂ ಎಫ್ ಐ ಡಿ ಮಾಡಿಸಿಕೊಳ್ಳಬೇಕಾಗಿ ಹಾಗೂ ಇಂಗು ಗುಂಡಿ, ಎರೆಹುಳು ಘಟಕಕ್ಕೆ ರೈತರಿಗೆ ಅವಕಾಶ ಇದೆ ಹಾಗೂ ಟಾರ್ಪಲ್ ಗಳು ಜೊತೆಗೆ ಪ್ರಧಾನಮಂತ್ರಿ ಯೋಜನೆ ಅಡಿಯಲ್ಲಿ ಪಂಷೆಟ್ ಪೈಪುಗಳು ದೊರೆಯುತ್ತಿದ್ದು ಇವುಗಳನ್ನು ರೈತರು ಅರ್ಜಿ ಕೊಡುವ ಮೂಲಕ ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮನು ಮಾಹಿತಿ ನೀಡಿ ಕಾಳು ಮೆಣಸು ಹಾಗೂ ಅಡಿಕೆ ಬೆಳೆಗೆ ಸಂಬಂಧಪಟ್ಟಂತೆ ಸರ್ಕಾರದಿಂದ ಸಿಗುವ ಅನುದಾನವನ್ನು ಬಿಪಿಎಲ್ ಕಾರ್ಡ್ ಹೊಂದಿರುವ ರೈತರು ಬಳಸಿಕೊಳ್ಳಬೇಕು. ಅಡಿಕೆಗೆ ಎಕರೆಗೆ 52000 ಅನುದಾನ ಸಿಗುತ್ತಿದೆ. ತಾಳೆ ಬೆಳೆ ಎಕರೆಗೆ 60 ಸಾವಿರದ ವರೆಗೂ ಸಬ್ಸಿಡಿಯನ್ನು ಸರ್ಕಾರ ಕೊಡುತ್ತಿದ್ದು,ಮೂಲಕ ಆರ್ಥಿಕವಾಗಿ ಸದೃಢರಾಗಬೇಕು.
ಸಕಲೇಶಪುರ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ಅನುದಾನಕ್ಕೆ ಅರ್ಜಿ ಈ ಗ್ರಾಮ ಪಂಚಾಯಿತಿಯಿಂದ ಬರುತ್ತಿದೆ ಎಂದು ತಿಳಿಸಿದರು.
ಹೆತ್ತೂರು ಜೂನಿಯರ್ ಇಂಜಿನಿಯರ್ ಚೆಸ್ಕಾಂ ಲೋಕೇಶ್, ಮಾತಡುತ್ತಾ ಸರ್ಕಾರದಿದ ಇರುವ ಅನುದಾನಗಳನ್ನು ವಿವರಿಸುವಾಗ ಹಡ್ಲಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಪರಮೇಶ್ ಗ್ರಾಮದಲ್ಲಿ ಬೀದಿ ದೀಪಗಳ ಸಮಸ್ಯೆ ಇದೆ ಈ ಭಾಗದಲ್ಲಿ ಕಾಡನೆ ಹೆಚ್ಚಾಗಿದ್ದು ಅಲ್ಲದೆ ಲೈನ್ ಮ್ಯಾನ್ ಗಳು ಕೂಡಲೇ ಬಳಕೆ ಬರುವ ಮೂಲಕ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಬೇಕು.
ನಿಮ್ಮ ಇಲಾಖೆಯಿಂದ ನಮ್ಮ ಗ್ರಾಮ ಪಂಚಾಯಿತಿಗೆ ಸಮಸ್ಯೆಯಾಗುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಅಧಿಕಾರಿ ಲೋಕೇಶ್ ಅವರು ಸಮಸ್ಯೆಗೆ ಕೂಡಲೇ ಸ್ಪಂದಿಸುವುದಾಗಿ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಅರೋಗ್ಯ ಇಲಾಖೆ ಯಿಂದ ಶುಕ್ರವಾರ ಸಂತೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಮೇಲ್ವಿಚಾರಕರಗಿದ್ದ ಕಾಮಾಕ್ಷಿ ತಾಯಿ ಕಾರ್ಡನ್ನು ಹನ್ನೆರಡು ತಿಂಗಳು ಒಳಗೆ ತೆಗೆದುಕೊಳ್ಳಬೇಕೆಂದು. ಅದಕ್ಕೆ ಮೂಲ ನಿವಾಸಿಗಳಾಗಿದ್ದು ಸರಿಯಾದ ರೀತಿಯ ದಾಖಲಾತಿಗಳನ್ನು ಕೊಡುವ ಮೂಲಕ ಪಡೆದುಕೊಳ್ಳಬೇಕು. ಎಲ್ಲರೂ ಆಯುಸ್ಮಾನ್ ಕಾರ್ಡನ್ನು ಮಾಡಿಸಿಕೊಳ್ಳುವುದು ಉತ್ತಮ. ಕ್ಷಯ ರೋಗಕ್ಕೆ ಸಂಬಂಧಪಟ್ಟಂತೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ ಹಾಗಾಗಿ ಎಲ್ಲರೂ ಗ್ರಾಮ ಪಂಚಾಯಿತಿಯಲ್ಲಿ ಕೈಜೋಡಿಸುವ ಮೂಲಕ ಕ್ಷಯರೋಗ ಮುಕ್ತ ಗ್ರಾಮ ಪಂಚಾಯಿತಿಯಾಗಿ ಮಾಡೋಣ ಎಂದು ಕರೆ ನೀಡಿದರು.
ಸ್ವಚ್ಛ ಗ್ರಾಮ ಯೋಜನೆಯಡಿಯಲ್ಲಿ ಬಸ್ ಸ್ಟಾಂಡ್ ಗಳನ್ನು ಸ್ವಚ್ಛ ಮಾಡುವಂತೆ ಸಭೆಗೆ ಬಂದ ಗ್ರಾಮಸ್ಥರು ಆಕ್ರೋಶ ಮಾಡಿದ್ದಾರೆ. ಇನ್ನು ಹೆಚ್ಚಿನ ಸಂಖ್ಯೆಯ ಇಲಾಖೆಯವರು ಅನುಪಸ್ಥಿತಿ ಎದ್ದು ಕಾಣುತ್ತಿದ್ದು, ಸಭೆಗೆ ಬಂದ ಗ್ರಾಮಸ್ಥರಲ್ಲಿ ಆಕ್ರೋಶದ ಹೊಗೆ ಕಾಣುತ್ತಿತು.
ಈ ಸಂದರ್ಭದಲ್ಲಿ ಸಕಲೇಶಪುರ ತಾಲೂಕಿನ ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳಾದ ಡಾಕ್ಟರ್ ವೆಂಕಟೇಶ್, ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮದ ಚುನಾಯಿತ ಸದಸ್ಯರು ಹಾಗೂ ಅತಿ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಭಾಗವಹಿಸಿದ್ದರು.


