ಮಲೆನಾಡು ರಕ್ಷಣಾ ಸೇನೆಯ ತಾಲ್ಲೂಕು ಘಟಕದ ವತಿಯಿಂದ ಇಂದು ಬಾಗೆಯ ವಿನಾಯಕ ಸಮುದಾಯ ಭವನದಲ್ಲಿ ತಾಲ್ಲೂಕು ಮಟ್ಟದ ಚರ್ಚಾ ಸಭೆ ನೆರವೇರಿತು. ಈ ಸಂದರ್ಭದಲ್ಲಿ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಲಾಯಿತು ಮುಂದಿನ ದಿನಗಳಲ್ಲಿ ಅವರ ಪರವಾಗಿ ಹೋರಾಟ ಮಾಡಿ ನ್ಯಾಯ ಒದಗಿಸುವ ಕೆಲಸ ಆಗುತ್ತದೆ. ತಾಲ್ಲೂಕು ಸಂಘಟನೆಯ ಘಟಕಗಳ ಪದಾಧಿಕಾರಿಗಳಿಗೆ ಸಂಘಟನೆ ಬಲ ಪಡಿಸುವಂತೆ ಸಮಾಜಮುಖಿ ಕಾರ್ಯ್ರಮಗಳನ್ನು ಮಾಡಿ ಪದಾಧಿಕಾರಿಗಳ ವ್ಯಕ್ತಿತ್ವ ವೃದ್ಧಿ ಪಡಿಸಬೇಕೆಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥಾಪಕ ರಾಜ್ಯ ಅಧ್ಯಕ್ಷರು ಚುನಾವಣೆಯ ಬಗ್ಗೆ ಜಾಗೃತಿ ಮೂಡಿಸಿದರು. ಚುನಾವಣೆಯ ದಿನದಂದು ಯೋಚಿಸಿ ಮತದಾನ ಮಾಡಿ ಯೋಗ್ಯತೆ ಇಲ್ಲದವರನ್ನು ಆಯ್ಕೆ ಮಾಡಿ ಬೇರೆ ಊರಿನ ಹಾಗೆ ಹೆಜ್ಜೆಗೊಂದು ಬಾರ್ ಇದ್ದಂತೆ ನಮ್ಮ ಮಲೆನಾಡು ಬಾಗದಲ್ಲು ಆಗಲು ಬಿಡಬೇಡಿ. ಸ್ವಾಭಿಮಾನಿಗಳಾಗಿ ಯೋಚಿಸಿ ಮತದಾನ ಮಾಡಿ, ಮೇ 10 ರಂದು ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದು ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಸಾಗರ್ ಜಾನೇಕೆರೆ, ರಾಜ್ಯ ಉಪಾಧ್ಯಕ್ಷರು ದರ್ಶನ್ ಪೂಜಾರಿ, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಅಜಿತ್ ಕುಮಾರ್ ಎಂ, ರಾಜ್ಯ ಉಸ್ತುವಾರಿ ವಸಂತ್, ರಾಜ್ಯ ಯುವಘಟಕದ ಅಧ್ಯಕ್ಷ ಕೃತಿ ವರ್ಮ, ತಾಲ್ಲೂಕು ಘಟಕದ ಅಧ್ಯಕ್ಷ ಸತೀಶ್, ಉಪಾಧ್ಯಕ್ಷ ತೆಜೇಷ್ ಗೌಡ, ಮಹಿಳಾ ಅಧ್ಯಕ್ಷೆ ವನಜಾ ರವರು ಮತ್ತು ಸುಶೀಲಮ್ಮ ಗೌರವಾಧ್ಯಕ್ಷರು ಮುಂತಾದವರು ಹಾಜರಿದ್ದರು

ವರದಿ : ಪ್ರಧಾನ ಸಂಪಾದಕರು ಎಸ್ ಎಮ್ ಮಂಜುನಾಥ್ ಸಂಪಾದಕರು : M. B. ಉಮೇಶ್, ಸಂಕಲನಕಾರ : ಮೋಹನ್ Fcc, ವ್ಯವಸ್ಥಾಪಕರು : ರಾಕೇಶ್. ಶೇಷಾದ್ರಿ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *