ಸಕಲೇಶಪುರ: ಪ್ರಾದೇಶಿಕ ಪಕ್ಷದ ಉಳಿವಿಗಾಗಿ ನನ್ನ ಈ ಇಳಿವಯಸ್ಸಿನಲ್ಲಿ ರಾಜ್ಯ ಸುತ್ತಾಟ ನಡೆಸುತ್ತಿದ್ದೆನೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡರು ಹೇಳಿದರು.ಗುರುವಾರ ಜೆಡಿಎಸ್ ಅಭ್ಯರ್ಥಿ ಹಾಲಿ ಶಾಸಕ ಎಚ್.ಕೆ ಕುಮಾರಸ್ವಾಮಿ ಪರ ಪಟ್ಟಣದಲ್ಲಿ ರೋಡ್ ಶೋ ನಡೆಸಿ ಮಾತನಾಡಿ, ರಾಜ್ಯದ ನೆಲ,ಜಲ ಸಂರಕ್ಷಣೆಗಾಗಿ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ. ರಾಜ್ಯದ ಜನರಿಗೆ ನೀರಿಲ್ಲದಿದ್ದರು ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವಂತ ಅನಿವಾರ್ಯತೆ ಸೃಷ್ಟಿಸಲಾಗಿದೆ. ಈ ಬಗ್ಗೆ ಲೋಕಸಭೆಯಲ್ಲಿ ಏಕಾಂಗಿ ಹೋರಾಟ ನಡೆಸಿದೆ. ಆದರೆ ಬಿಜೆಪಿಯ 18 ಲೋಕಸಭಾ ಸದಸ್ಯರಿದ್ದರು ನನಗೆ ಸಹಕಾರ ನೀಡಲಿಲ್ಲ. ನಮಗೆ ಮೇಕೆದಾಟುವಿನಲ್ಲಿ ಡ್ಯಾಂ ನಿರ್ಮಾಣ ಮಾಡುವ ಶಕ್ತಿ ಇಲ್ಲವ ಎಂದು ಪ್ರಶ್ನಿಸಿದರು. ಬಿಜೆಪಿ,ಕಾಂಗ್ರೆಸ್ನವರಿಗೆ ರಾಜ್ಯದ ಜನರ ಹಿತ ಬೇಕಾಗಿಲ್ಲ. ಈ ಬಾರಿ ರಾಜ್ಯದ ಜನತೆ ಬಿಜೆಪಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದರು. ಎಚ್.ಕೆ ಕುಮಾರಸ್ವಾಮಿಯವರನ್ನು ಬೆಂಬಲಿಸುವ ಮೂಲಕ ಪ್ರಾದೇಶಿಕ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಲು ಸಹಕಾರ ನೀಡ ಬೇಕು ಎಂದು ಮನವಿ ಮಾಡಿಕೊಳ್ಳುತ್ತೆನೆ ಎಂದರು. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿದ್ದ 20 ಪರ್ಸೆಂಟ್ ಕಮಿಷನ್ನ್ನು ಬಿಜೆಪಿ ಸರ್ಕಾರ 40 ಪರ್ಸೆಂಟ್ ಗೆ ಏರಿಕೆ ಮಾಡಿದ್ದು, ರಾಜ್ಯವನ್ನು ಲೂಟಿ ಮಾಡಿದೆ. ಈ ಬಾರಿ ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ನಿಶ್ಚಿತ. ನರೇಂದ್ರಮೋದಿ ಅವನೂರಿಗೆ ದೊಡ್ಡವನು.ಸೋನಿಯಗಾಂದಿ ಅವರೊರಿಗೆ ದೊಡ್ಡವರು. ದೇವೆಗೌಡರು ಇಡಿ ಕರ್ನಾಟಕಕ್ಕೆ ದೊಡ್ಡವರು. ರೈತರ ಬಗ್ಗೆ ನಿಜವಾದ ಕಾಳಜಿಹೊಂದಿರುವ ಜೆಡಿಎಸ್ಗೆ ಮತ ಹಾಕುವ ಮೂಲಕ ಎಚ್.ಕೆ ಕುಮಾರಸ್ವಾಮಿ ಅವರನ್ನು ಬೆಂಬಲಿಸ ಬೇಕು ಎಂದರು.ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ಕಳೆದ 15 ವರ್ಷದಲ್ಲಿ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ದಿಪಡಿಸಿದ್ದೆನೆ ವಿರೋದಿಗಳು ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ನನಗೆ ಮತನೀಡುವ ಮೂಲಕ ನಿಮ್ಮಗಳ ಸೇವೆಗೆ ಅವಕಾಶ ಮಾಡಿಕೊಡ ಬೇಕು ಎಂದು ಮನವಿ ಮಾಡಿದರು.ಇದೆ ವೇಳೆ ಬಿಜೆಪಿ ಟಿಕೆಟ್ ವಂಚಿತ ನಾರ್ವೆ ಸೋಮಶೇಖರ್, ಕಾಂಗ್ರೆಸ್ ಮುಖಂಡ ಮಸ್ತಾರೆ ಲೋಕೇಶ್, ತಾಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷೆ ಸುನಂದಾ ನಾಗರಾಜ್, ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ನಿವೃತ್ತ ಇಂಜಿನಿಯರ್ ಗೊರೂರು ವೆಂಕಟೇಶ್, ಹೆತ್ತೂರು ವಿಜಿಕುಮಾರ್ ಸೇರಿದಂತೆ ಮುಂತಾದವರು ಜೆಡಿಎಸ್ ಪಕ್ಷ ಸೇರ್ಪಡೆಯಾದರು.ಈ ವೇಳೆ ಜೆಡಿಎಸ್ ವರೀಷ್ಠ ಎಚ್.ಡಿ ರೇವಣ್ಣ ಪಕ್ಷದ ಅಧ್ಯಕ್ಷ ಕೆ.ಎಲ್ ಸೋಮಶೇಖರ್,ಬಿ.ಎ ಜಗನ್ನಾಥ್ ಮುಂತಾದವರಿದ್ದರು. ಕಳೆದ ಬಾರಿಯ ಪರಾಜಿತ ಬಿಜೆಪಿ ಅಭ್ಯರ್ಥಿ ನಾರ್ವೇ ಸೋಮಶೇಖರ್ ಕಾಂಗ್ರೆಸ್ ಮುಖಂಡ ಮಾಸ್ತರೆ ಲೋಕೇಶ್,ಬಿಜೆಪಿ ಮುಖಂಡ ಹೆತ್ತೂರು ವಿಜಯಕುಮಾರ್ , ಸುರೇಶ್ ಕ್ಯಾನಹಳ್ಳಿ , ಮಂಜುನಾಥ ಪುರಸಭೆ ಮಾಜಿ ಅಧ್ಯಕ್ಷರು, ಹುರುಡಿ ಕೇಶವಮೂರ್ತಿ, ಸುಧೀರ್ ಅವರೆಕಾಡು, ಹರೀಶ್ ವೈಲ್ಡ್ ವಾಗ್ಟೈಲ್ ಸೇರಿ ಹಲವರು ಜೆಡಿಎಸ್ ಸೇರಿದರು.

ವರದಿ : ಪ್ರಧಾನ ಸಂಪಾದಕರು ಎಸ್ ಎಮ್ ಮಂಜುನಾಥ್

ಸಂಪಾದಕರು : M. B. ಉಮೇಶ್

ಸಂಕಲನಕಾರ : ಮೋಹನ್ Fcc

ವ್ಯವಸ್ಥಾಪಕರು : ರಾಕೇಶ್. ಶೇಷಾದ್ರಿ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *