
ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿಧ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಹಿರಿಸಮುದ್ರ ಗ್ರಾಮದಲ್ಲಿ ಪಾರ್ಥೇನಿಯಂ ಹಾಗು ಪ್ಲಾಸ್ಟಿಕ್ ನಿರ್ಮೂಲನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಪ್ಲಾಸ್ಟಿಕ್ ಹಾಗು ಪಾರ್ಥೇನಿಯಂನಿಂದ ಉಂಟಾಗುವ ತೊಂದರೆಗಳನ್ನು ಪ್ಲಾಸ್ಟಿಕ್ ರಾಕ್ಷಸ ಹಾಗು ಪಾರ್ಥೇನಿಯಂ ರಾಕ್ಷಸ ಎಂಬ ಪಾತ್ರಗಳ ನಡುವಿನ ಸಂಭಾಷಣೆಯ ಮೂಲಕ ಹಳ್ಳಿಯ ಜನರಿಗೆ ತಿಳಿಸಿಕೊಟ್ಟರು.
ತಿಪ್ಪೆಯ ಸುತ್ತಮುತ್ತ ಪಾರ್ಥೇನಿಯಂ ಗಿಡಗಳು ಬೆಳೆದು ಅದರ ಬೀಜ ಗೊಬ್ಬರದ ಮೂಲಕ ಹೊಲಗಳಿಗೆ ಸೇರಿ ಬೆಳೆಗಳ ವಿನಾಶಕ್ಕೆ ಬುನಾದಿ ಯಾಗುವುದೆಂದು ಜಾಗೃತಿ ಮೂಡಿಸಿದರು.
ಪಾರ್ಥೇನಿಯಂ ಗಿಡವನ್ನು ನಿರ್ಮೂಲನೆ ಮಾಡುವಲ್ಲಿ ಜೈಗೋಗ್ರಮ ಹುಳುವಿನ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟರು.
ಜಾನುವಾರಗಳ ಜೀವಕ್ಕೆ ಆಪತ್ತು ತರುವ ಪ್ಲಾಸ್ಟಿಕ್ ಅನ್ನು ದೂರವಿಡಿ ಎನ್ನುತಾ ಗ್ರಾಮದ ಸುತ್ತಮುತ್ತಲಿನ ಪ್ಲಾಸ್ಟಿಕ್ ಅನ್ನು ಸಂಗ್ರಹಿಸಿ ವಿಲೇವಾರಿ ಮಾಡಿದರು.

